Showing posts with label ಬೆಳಕಾ ತೋರಿಸೊ ಯೋಗೀಂದ್ರರ ಜನಕಾ gurugovinda vittala. Show all posts
Showing posts with label ಬೆಳಕಾ ತೋರಿಸೊ ಯೋಗೀಂದ್ರರ ಜನಕಾ gurugovinda vittala. Show all posts

Monday, 6 September 2021

ಬೆಳಕಾ ತೋರಿಸೊ ಯೋಗೀಂದ್ರರ ಜನಕಾ ankita gurugovinda vittala

 kruti by ಗುರುಗೋವಿಂದಠಲ (ಮೈಸೂರು)

ರಾಗ: ಮಧ್ಯಮಾವತಿ ತಾಳ: ಅಟ


ಬೆಳಕಾ ತೋರಿಸೊ ಯೋಗೀಂದ್ರರ ಜನಕಾ 

ಮಂತ್ರಾಲಯ ಪುರ ಪಾಲಕ 


ಫಾಲನಯನ ಪ್ರಿಯ ಪಾಲಾಬ್ಭಿ ಶಾಯಿಯ

ಶೀಲ ಮೂರುತಿ ತೋರೊ ಮೇಲು ಕರುಣದಿ  ಅ.ಪ.

ಭರ್ಮೋದರಸುತ ಸುರಮುನಿಯಿಂದಾ ಉಪದೇಶದಿಂದಾ

ಕರ್ಮಜ ದೇವರ್ಕಗಳ ಮಹವೃಂದಾ ಮಧ್ಯದಿ ನಲವಿಂದಾ 

ಊರ್ಮಿಳ ಪತಿ ಭ್ರಾತೃ ಪೇರ್ಮೆಯಿಂದಲಿ ನಿನ್ನ

ನಿರ್ಮಮತೆಗೆ ಮೆಚ್ಚಿ ಪರ್ಮನ ಮಾಡಿದ  1

ಅನಲಾ ಭೃಗು ಪ್ರಸೂತಿಗಳಿಗೇ ಅವರಿಗೆ ಸಮನಾಗೇ

ಅನಿಲಾನಿಂದಾವೇಶಿತನಾಗೇ ಬಾಲ್ಹೀಕನಾಗೇ 

ನಿನ್ನ ತನುವು ಭೂಸ್ಪರ್ಶವಾಗಲು ಆ

ಕ್ಷಣದಲಿ ಬಿರಿಯಿತು ತತ್ ಕ್ಷಿತಿ ದೇಶವು  2

ಸಿರಿ ಗುರುಗೋವಿಂದವಿಠ್ಠಲನಾ ಭವ್ಯ ಸುಚರಣಾ

ಸರಸಿಜ ಹೃದ್ವಾರಿಜದಲಿ ಪವನಾನಲಿ ಸ್ಥಿತನಾಗಿಹನಾ 

ತೋರಿ ಪೊರೆಯೊ ಕರುಣಾಕರ ಗುರು 

ಸಾರಿ ಭಜಿಪೆ ತವ ಚರಣಾಂಬುರುಹವ  3

****