Showing posts with label ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು ಮೋಕ್ಷದಾ ಮಾರ್ಗವು ಅವಗಿಲ್ಲವು bheemashankara. Show all posts
Showing posts with label ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು ಮೋಕ್ಷದಾ ಮಾರ್ಗವು ಅವಗಿಲ್ಲವು bheemashankara. Show all posts

Friday, 6 August 2021

ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು ಮೋಕ್ಷದಾ ಮಾರ್ಗವು ಅವಗಿಲ್ಲವು ankita bheemashankara

 ...

 kruti by ಭೀಮಾಶಂಕರರು ದಾಸರು bheemashankara


ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ


ಮೋಕ್ಷ ಲಕ್ಷ್ಮಿಯುಂಟು | ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1


ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2


ಶಾಂತಿ ಸತಿಯಳು ಉಂಟು ಮತಿಯು ಪುತ್ರರು ಉಂಟು | ಅಂತ್ಯಕಾಲಕ್ಕೆ ರಾಮನಾಮ ಉಂಟು | ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3


ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4


ಬ್ರಹ್ಮ ಪದವುಂಟು ವಾ ಬ್ರಾಹ್ಮಣರ ದಯವುಂಟು | ಬ್ರಹ್ಮಾಂಡದೊಳಗೆ ಸಂದೇಹವುಂಟು | ಬ್ರಹ್ಮಾಹಮಸ್ಮಿಯುಂಟು | ಬ್ರಹ್ಮವೇ ತಾನುಂಟು | ಭೀಮಾಶಂಕರ ಭಿಕ್ಷೆ ಬೇಡಲುಂಟು 5

***