Showing posts with label ಸುರಮುನಿಜನನುತಪಾದನಿನ್ನಶರಣು prasannavenkata. Show all posts
Showing posts with label ಸುರಮುನಿಜನನುತಪಾದನಿನ್ನಶರಣು prasannavenkata. Show all posts

Monday, 18 November 2019

ಸುರಮುನಿಜನನುತಪಾದನಿನ್ನಶರಣು ankita prasannavenkata

by ಪ್ರಸನ್ನವೆಂಕಟದಾಸರು
ಸುರ ಮುನಿಜನನುತಪಾದನಿನ್ನಶರಣು ಪೊಕ್ಕೆನೊ ಗೋವಿಂದ ನೀಚರಕೈಯಲಿ ಕೊಡದಿರೊ ಎನ್ನ ಮೇಲ್ಗಿರಿ ಶ್ರೀನಿವಾಸಪಾವನ್ನಪ.

ದುಷ್ಟದೂಷಕ ಸಂಗದಿಂದೆ ನನ್ನನಿಷ್ಠೆ ಜಾರುತಲಿದೆ ತಂದೆ ಸಲೆಭ್ರಷ್ಟನಾಗುವುದೇನು ಚಂದೆ ಬಲುಕಷ್ಟಿಸಿ ಭವದಲಿ ನೊಂದೆ 1

ಅಮಿತ ದುರ್ಗುಣ ದೋಷಹಾರಿಶುಭಅಮಲ ಮುಕ್ತಿದಾತ ಉದಾರಿ ಎನ್ನಭ್ರಮಣ ನೀಗಿಸು ಹೊರೆ ಸ್ವಾಮಿ ಹೃತ್ಕಮಲದಿ ಪ್ರಕಟಿಸು ಪ್ರೇಮಿ 2

ಅರಿಯೆನರಿಯೆ ಅನ್ಯಮರೆಯೆ ನಿನ್ನಸ್ಮರಣೆಗೆಚ್ಚರವಿತ್ತು ಹೊರೆಯೊಸಿರಿಗುರು ಆನಂದಮುನಿ ದೊರೆಯೆನಿತ್ಯಪರಸನ್ನ ವೆಂಕಟ ಭಕ್ತರ ಸಿರಿಯೆ 3
********