ಪುರಂದರದಾಸರು
ರಾಗ ಕಾಂಭೋಜಿ ಝಂಪೆ ತಾಳ
ತಾ ಪಡೆದು ಬಂದುದಕುಪಾಯವೇನು
ಕೋಪದಲಿ ಶ್ರೀಪತಿಯ ಶಪಿಸಿದರೇನು
ಅನ್ನಕಿಲ್ಲವು ಎನ್ದು ಅತಿದೈನ್ಯ ಪಡಲೇನು
ಮನ್ನಣೆಯ ಸೌಭಾಗ್ಯ ಬಯಸಲೇನು
ತನ್ನ ಶಿರ ಅಡಿ ಮಾಡಿ ತಪವ ಮಾಡಿದರೇನು
ಎಣ್ಣೆ ಹಚ್ಚಿ ಹುಡಿಯೊಳಗೆ ಉರುಳಾಡಲೇನು
ಸರಿಯ ಜನರನು ನೋಡಿ ಕರುಬಿ ಕೊರಗಿದರೇನು
ಬರಿದೆ ನಿಂದೆಯ ಮಾಡಿ ಪರಚಿಕೊಳಲೇನು
ಇರುಳು ಹಗಲೊಂದಾಗಿ ಕುದಿದು ಸೊರಗಿದರೇನು
ಅರಿಯದ ಮನುಜರಿಗೆ ಆಲ್ಪರಿದರೇನು
ಕಂಡ ದೇವತೆಗಳಿಗೆ ಕೈಯ ಮುಗಿದರೆ ಏನು
ಷಂಡತನದಲಿ ಜಗವ ಸರಿಸಿದರೇನು
ಮಂಡಲಾಧಿಪ ನಮ್ಮ ಪುರಂದರ ವಿಟ್ಠಲನ
ಕೊಂಡಾಡುವುದಕಿನ್ನು ಸಂದೇಹವೇನು
***
ರಾಗ ಕಾಂಭೋಜಿ ಝಂಪೆ ತಾಳ
ತಾ ಪಡೆದು ಬಂದುದಕುಪಾಯವೇನು
ಕೋಪದಲಿ ಶ್ರೀಪತಿಯ ಶಪಿಸಿದರೇನು
ಅನ್ನಕಿಲ್ಲವು ಎನ್ದು ಅತಿದೈನ್ಯ ಪಡಲೇನು
ಮನ್ನಣೆಯ ಸೌಭಾಗ್ಯ ಬಯಸಲೇನು
ತನ್ನ ಶಿರ ಅಡಿ ಮಾಡಿ ತಪವ ಮಾಡಿದರೇನು
ಎಣ್ಣೆ ಹಚ್ಚಿ ಹುಡಿಯೊಳಗೆ ಉರುಳಾಡಲೇನು
ಸರಿಯ ಜನರನು ನೋಡಿ ಕರುಬಿ ಕೊರಗಿದರೇನು
ಬರಿದೆ ನಿಂದೆಯ ಮಾಡಿ ಪರಚಿಕೊಳಲೇನು
ಇರುಳು ಹಗಲೊಂದಾಗಿ ಕುದಿದು ಸೊರಗಿದರೇನು
ಅರಿಯದ ಮನುಜರಿಗೆ ಆಲ್ಪರಿದರೇನು
ಕಂಡ ದೇವತೆಗಳಿಗೆ ಕೈಯ ಮುಗಿದರೆ ಏನು
ಷಂಡತನದಲಿ ಜಗವ ಸರಿಸಿದರೇನು
ಮಂಡಲಾಧಿಪ ನಮ್ಮ ಪುರಂದರ ವಿಟ್ಠಲನ
ಕೊಂಡಾಡುವುದಕಿನ್ನು ಸಂದೇಹವೇನು
***
pallavi
tA paDedu bandudakupAyavEnu
anupallavi
kOpadali shrIpatiya shApisidarEnu
caraNam 1
annakillavu endu atidainya paDalEnu mannaNeya saubhAgya bayasalEnu
tanna shira aDi mADi tapava mADidarEnu eNNe hacci huDiyoLage uruLADalEnu
caraNam 2
sariya janaranu nODi karubi koragidarEnu baride nindeya mADi paraci koLalEnu
iruLu hagalondAgi kudidu soragidarEnu ariyada manujarige AlparidarEnu
caraNam 3
kaNDa dEvategaLige kaiya mugidare Enu SaNDatanadali jagava sarisidarEnu
maNDalAdhipa namma purandara viTTalana koNDADuvudakinnu sandEhavEnu
***
ತಾ ಪಡೆದು ಬಂದುದಕುಪಾಯವೇನು |
ಕೋಪದಲಿ ಶ್ರೀಪತಿಯ ಶಾಪಿಸಿದರೇನು ಪ.
ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು |ಧಾನ್ಯಧನಗಳ ಬೇಡಿ ಧರೆಗಿಳಿದರೇನು |ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು |ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು 1
ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು |ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು |ಅರಿಯದ - ಮನುಜರಿಗೆ ಆಲ್ಪರಿದರೇನು 2
ಹೋಗದೂರಿನ ದಾರಿಕೇಳಿ ಮಾಡುವದೇನು |ಮೂಗನ - ಕೂಡ ಏಕಾಂತವೇನು ||ಯೋಗೀಶ ಪುರಂದರವಿಠಲನ ನೆನೆಯದವ |ತ್ಯಾಗಿಯಾದರೆ ಏನು ಭೋಗಿಯಾದರೆ ಏನು 3
*******