Showing posts with label ವನಿತೆ ನೀ ತೋರಿಸೆ ಹನುಮನ ಬೇಗ ತನು ಮನ ಧನವನು purandara vittala VANITE NEE TORISE HANUMANA BEGA TANU MANA DHANAVANU. Show all posts
Showing posts with label ವನಿತೆ ನೀ ತೋರಿಸೆ ಹನುಮನ ಬೇಗ ತನು ಮನ ಧನವನು purandara vittala VANITE NEE TORISE HANUMANA BEGA TANU MANA DHANAVANU. Show all posts

Thursday, 2 September 2021

ವನಿತೆ ನೀ ತೋರಿಸೆ ಹನುಮನ ಬೇಗ ತನು ಮನ ಧನವನು purandara vittala VANITE NEE TORISE HANUMANA BEGA TANU MANA DHANAVANU

ವನಿತೆ ನೀ ತೋರಿಸೆ ಹನುಮನ ಬೇಗ |ತನು-ಮನ-ಧನವನು ನಿನಗೀವೆನೀಗ ಪ

ಆತುರದಿಂದಲಿ ಉದಧಿಹಾರಿದವನ |ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||ಘಾತಕರನ್ನು ಮುರಿದಟ್ಟಿದವನ -ಸತಿ|ಸೀತೆಯಪತಿರಘುನಾಥಗರ್ಪಿಸಿದನ1

ಪಾಂಡುನಂದನನಿಗೆ ಅನುಜನಾಗಿಹನ |ಪುಂಢರೀಕಾಕ್ಷನ ಚರಣಸೇವಿಪನ ||ಪುಂಡ ಕೌರವ ಶಿರವ ಚೆಂಡನಾಡಿದವನ 2

ಎರಡು ಮೂರಾರೊಂದು ಕುಮತ ಖಂಡಿಸಿದನ |ಭರದಿ ಮಧ್ವಮತ ಉದ್ಧರಿಸಿದನ ||ಧರೆಯೊಳಧಿಕ ಶ್ರೀಹರಿಯ ಭಜಕನ |ವರದ ಶ್ರೀಪುರಂದರವಿಠಲರಾಯನ3
***