Showing posts with label ಮಂಗಳಂ ರಮಾರಣಮಣಗೆ ಮಂಗಳಂ ನೀರೊಳು purandara vittala. Show all posts
Showing posts with label ಮಂಗಳಂ ರಮಾರಣಮಣಗೆ ಮಂಗಳಂ ನೀರೊಳು purandara vittala. Show all posts

Friday, 6 December 2019

ಮಂಗಳಂ ರಮಾರಣಮಣಗೆ ಮಂಗಳಂ ನೀರೊಳು purandara vittala

ಪುರಂದರದಾಸರು
ಮಂಗಳಂ ರಮಾರಣಮಣಗೆ ಮಂಗಳಂ ಪ. 

ನೀರೊಳು ಮುಳಗಿನಿಗಮ ತಂದವಗೆಘೋರರೂಪದಿ ಕಂಬದೋಳ್ ಬಂದವಗೆ 1

ಪೊಡವಿಯನೀರಡಿ ಮಾಡಿದ ದೇವಗೆಕೊಡರಿಯ ಕರನಾಗಿ ಜನಿಸಿದವಗೆಮಡದಿ ಸಹಿತ ವನವಾಸದೊಳಿದ್ದವಗೆಬಿಡದೆ ಪಾಂಡವ ಭೃತ್ಯನಾದವಗೆ 2

ಭರದಲಿ ಸತಿಯರ ವ್ರತಗೆಡಿಸಿದವಗೆಧುರದಲಿ ತುರಗವನೇರಿದವಗೆಗಿರಿಜಾಪುರದೊಳು ವಾಸವಿದ್ದವಗೆವರದ ಶ್ರೀ ಪುರಂದರವಿಠಲಗೆ 3
*******