ಪತಿತಪಾವನಹುದೋ ಸ್ವಾಮಿ pa
ಯತಿಮುನಿಜನವನ ಅತಿಶಯಾನಂದ ನೀ ಶ್ರುತಿಗಗೋಚರನಹುದೋ ಸ್ವಾಮಿ 1
ಕ್ಷಿತಿಯೊಳು ಗೌತಮ ಸತಿಯಳುದ್ಧರಿಸಿದ ಅತಿ ದಯಾಳನಹುದೋ ಸ್ವಾಮಿ 2
ನಷ್ಟಾ ಜಮಿಳನ ದೃಷ್ಟಿಸಿ ನೋಡಿನ್ನು ಶಿಷ್ಟತನವ ಮಾಡಿದ್ಯೋ ಪ್ರಾಣಿ 3
ಎಷ್ಟೆಂದು ಪೊಗಳಲಿ ಸೃಷ್ಟಿಯೊಳಗೆ ನಿಮ್ಮ ದುಷ್ಟಮರ್ದನನಹುದೋ ಸ್ವಾಮಿ 4
ಅತಿ ಮಂದಮತಿ ಮಹಿಪತಿಗೆ ಸದ್ಗೈಸಿನ್ನು ಪತಿತಪಾವನ ಮಾಡಿದ್ಯೋ ಸ್ವಾಮಿ 5
****