ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ಮನವೆ ರಾಮಚಂದ್ರನಾ ದ | ಯಾಂಬು ನಿಧಿ ಸದ್ಗುಣ ಸಾಂದ್ರನಾ|| ನಂಬಿದ ಭಕ್ತ ಕುಟುಂಬಿಯೆನಿಸುವ| ಅಂಬುಜನಾಭನ ಹಂಬಲವಿಡಿದು ಪ
ದಶರಥ ಕೌಸಲ್ಯ ಬಸುರಿಲಿ ಬಂದು| ಋಷಿಮಖ ರಕ್ಷಿಸಿ ಶರದಿ|| ಅಸುರೆಯ ಭಂಗಿರಿಸಿ ನಡೆಯಲಿ|ಮುನಿ| ಅಸಿಯಳುದ್ದರಿಸಿ ಉಂಗುಟದಲಿ| ಅಸಮ ಧನುವೆತ್ತಿ ವಸುಧಿಯ ಮಗಳ ವ ರಿಸಿಕೊಂಡು ಬಂದನು ಕುಶಲವಿಕ್ರಮನಾ1
ಜನಕನ ವಚನಕ ಮನ್ನಿಸಿ|ಸತಿ| ಅನುಜನೊಡನೆ ವಿಹರಿಸಿ| ವನಚರ ಭೂಚರ ನೆರಹಿಸಿ|ದಾಟಿ| ವನಧಿಯೊಳಗ ಗಿರಿಬಂಧಿಸಿ|| ಮುನಿದು ಮರ್ದಿಸಿ ದಶಾನನ ಮುಖ್ಯ| ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2
ಸುರರಿಗೆ ನೀಡಿದಾನಂದನು|ಸೀತೆ| ವರಿಸಿ ಅಯೋಧ್ಯಕ ಬಂದನು| ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು| ವರ ಮಹಿಪತಿ ನಂದನೊಡೆಯನು|| ಅರಿತು ಸದ್ಬಾವತಿ ಸರಿಸಲಿ ಸದ್ಗತಿ| ಶೆರೆವಿಡಿದೆಳೆತಹದರಿಯಲೋ ನಾಮಾ3
***