Showing posts with label ನೀನಿರು ಬೇಗ purandara vittala. Show all posts
Showing posts with label ನೀನಿರು ಬೇಗ purandara vittala. Show all posts

Friday 6 December 2019

ಶರೀರಕ್ಕೆ ಬರುತಿದೆ ವೆಚ್ಚ, ನೀನಿರು ಬೇಗ purandara vittala

ರಾಗ ನಾದನಾಮಕ್ರಿಯ ಛಾಪು ತಾಳ

ಶರೀರಕ್ಕೆ ಬರುತಿದೆ ವೆಚ್ಚ, ನೀ-
ನಿರು ಬೇಗ ಪಯಣದಿಂದೆಚ್ಚತ್ತು ನಿಚ್ಚ ||ಪ ||

ಮರಣ ಕಾಲವು ಮುಂದೆ ಬಂತು, ಈ
ಧರಣಿಯ ಮೇಲೆ ಇರುವ ಋಣವೆಲ್ಲ ಸಂತು
ತರಳ ಯೌವನ ವೃದ್ಧನಿಂತು, ನೀನು
ಹರಿಯ ಪೂಜೆಯ ಮಾಡದಿರಬೇಡ ಭ್ರಾಂತು ||

ಬರೆದ ಬರೆಹವಿಲ್ಲಿ ಇದ್ದಿ , ಯಮ-
ಪುರಕೆ ಸಮ್ಮತವೊ ಇಲ್ಲವೊ ಎಂಬ ಸುದ್ದಿ
ಹೊರಗೆ ಹುಟ್ಟಿತು ಪ್ರಸಿದ್ಧಿ, ನಿನಗೆ
ಪರಗತಿ ಸಾಧನ ಮಾಳ್ಪುದೆ ಬುದ್ಧಿ ||

ಮೃತ್ಯು ಕಾಲಕ್ಕೆ ಮನೆಯಾಕೆ, ನಾವು
ಅತ್ತಿತ್ತ ಸುಳಿವಾಗ ಈ ಹೊತ್ತು ಸಾಕೆ
ಮತ್ತೆ ತಿಳಿದು ನೋಡು ಜೋಕೆ, ಸೃಷ್ಟಿ-
ಕರ್ತು ಪುರಂದರವಿಠಲನೆಂಬುದಕೆ ||
********