Showing posts with label ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ mahipati. Show all posts
Showing posts with label ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ mahipati. Show all posts

Wednesday, 1 September 2021

ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ankita mahipati

ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಪ  


ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು ಭಿನ್ನವಿಲ್ಲದೆ ನೋಡಿ ಹಂಬಲಿಸುತ ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ 1 

ಸುರಸ ಸಾರಾಯದನುಭವ ಬೆರಸಲಾಗಿ ತಾಂ ವರ ಮಹಾಕೃಪೆ ಘನದೊಳವಿನಿಂದ ಧರೆಯೊಳಾನಂದ ಸುಖ ಸಾರಿಡುತ ಪೂರ್ಣ ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ 2 

ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ ತಿಳಿದು ಶ್ರಯಧೇನಾಗಿ ಬಂತು ಬಳಿಗೆ ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ 3

***