ರಾಗ ಅಭೇರಿ ಆದಿತಾಳ
ಕಾಖಂಡಕಿ ಶ್ರೀ ಮಹಿಪತಿದಾಸರ ಕೃತಿ
ದೇವಾದಿದೇವ ನೀನಹುದೊ ಶ್ರೀಹರಿ
ಕಾವ ಕಾರುಣಿ ನೀನೆವೆ ಮುರಾರಿ॥ಪ॥
ಕಮಲಭವಾರ್ಚಿತ ಕಾರುಣ್ಯಶೀಲಾ
ವಿಮಲ ವಿರಾಜಿತ ಮದನ ಗೋಪಾಲ॥೧॥
ಕನಕಾಂಬರಧರ ಕಸ್ತೂರಿತಿಲಕಾ
ಸನಕಾದಿ ವಂದ್ಯ ಶರಣರಕ್ಷಕಾ॥೨॥
ಅಮಿತ ಪರಾಕ್ರಮ ಅಗಣಿತ ಮಹಿಮಾ
ಅಮರಜನೇತ್ರ ನೀನಹುದೊ ನಿಸ್ಸೀಮಾ॥೩॥
ಮುನಿಜನ ಪಾಲಕಾ ಮಾಮನೋಹರ
ಘನ ಸುಖದಾಯಕ ಸುಜನ ಸಹಕಾರ॥೪॥
ಭಾನುಕೋಟಿ ತೇಜ ನೀನೆ ಸುಹೃದಯಾ
ದೀನದಯಾಳು ನೀನಹುದೋ ಮಹಿಪತಿಯಾ ॥೫॥
***
ರಾಗ ಭೀಮಪಲಾಸ್ ತ್ರಿತಾಳ (raga, taala may differ in audio)
ದೇವಾಧಿದೇವ ನೀನಹುದೋ ಶ್ರೀಹರಿ
ಕಾವ ಕರುಣಿ ನೀನೆವೆ ಮುರಾರಿ ||ಪ||
ಕಮಲಭವಾರ್ಚಿತ ಕಾರುಣ್ಯಶೀಲ
ವಿಮಲ ವಿರಾಜಿತ ಮದನ ಗೋಪಾಲ ||೧||
ಕನಕಾಂಬರಧರ ಕಸ್ತೂರಿತಿಲಕ
ಸನಕಾದಿವಂದ್ಯ ಶರಣರಕ್ಷಕ ||೨||
ಅಮಿತಪರಾಕ್ರಮ ಅಗಣಿತ ಮಹಿಮ
ಅಮರಜನೇತ್ರ ನೀನಹುದೊ ನಿಸ್ಸೀಮ ||೩||
ಮುನಿಜನ ಪಾಲಕ ಮಾಮನೋಹರ
ಘನಸುಖದಾಯಕ ಸುಜನ ಸಹಕಾರ ||೪||
ಭಾನುಕೋಟಿತೇಜ ನೀನೇ ಸುಹೃದಯ
ದೀನದಯಾಳು ನೀನಹುದೋ ಮಹಿಪತಿಯ ||೫||
***