Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ದಾಸದೀಕ್ಷೆ ಸುಳಾದಿ
ಶ್ರೀಮಧ್ವಮತ ಪ್ರಶಂಸನಾಪೂರ್ವಕ ವಾಯುವಂತರ್ಯಾಮಿ ಶ್ರೀಹರಿಯನ್ನೆ ಭಜಿಸುವುದು ಸುಲಭ ಸಾಧನ
ರಾಗ ಶಂಕರಾಭರಣ
ಧ್ರುವತಾಳ
ಹರಿಯೆ ನಿನ್ನಾಧೀನ ಸಕಲ ಜ್ಞಾನೇಂದ್ರಿಯಂಗಳು|
ಹರಿ ನಿನ್ನಾಧೀವ ಸಕಲ ಕರ್ಮೇಂದ್ರಿಯಂಗಳು|
ಹರಿಯೆ ನಿನ್ನಾಧೀನ ಪಂಚಭೂತಾತ್ಮಗಳು|
ಹರಿಯೆ ನಿನ್ನಾಧೀನ ಮನ ಚಿತ್ತಾದಿಗಳು|
ಹರಿಯೆ ನಿನ್ನಾಧೀನ ಸಕಲ ಚೇತನವು|
ಹರಿಯೆ ನಿನ್ನಾಧೀನ ಸರ್ವ ಚೇಷ್ಟೆಗಳು|
ಹರಿಯೆ ನೀ ನೇಮಿಸಿದ ಕಾರಣ ಎನ್ನ|
ಶರೀರದೊಳಗೆ ಎಲ್ಲ ಭರಿತವಾಗಿದೆ|
ಪೊರಗಿದ್ದ ಸರಕು ಬೆಲೆ ಮಾಡಿದಂತೆ ಇದ್ದ |
ಸರಕು ಧನವ ವಿತ್ತು ತುಂಬಲಿಲ್ಲ |
ಶರಣರ ಮೊರೆ ಕೇಳೋ ವಿಜಯವಿಠ್ಠಲರೇಯ |
ಮರದು ಬಿಡುವನಲ್ಲ ಬಿರಿದುಳ್ಳ ದೇವನೆ ॥ 1 ॥
ಮಟ್ಟತಾಳ
ಕುಣಿಸಿದರೆ ಕುಣಿವೆ ನಗಿಸಿದರೆ ನಗುವೆ|
ಮಣಿಸಿದರೆ ದಣಿವೆ ಅಳಿಸಿದರೆ ಅಳುವೆ|
ಉಣಿಸಿದರೆ ಉಣುವೆ ಉಡಿಸಿದರೆ ಉಡುವೆ |
ನೆನಿಸಿದರೆ ನೆನಿವೆ
ಮನುಜ ವೇಷ ಪ್ರೀಯ ವಿಜಯವಿಠ್ಠಲ ಹರಿ|
ನೆನವಿತ್ತರೆ ನೆನೆವೆ ದಣುವಿತ್ತರೆ ದಣುವೆ ॥ 2 ॥
ತ್ರಿವಿಡಿತಾಳ
ತಪುತ ಮುದ್ರಿಗಳಿಲ್ಲದಂಥ ಮಾನವ ನಿನ್ನ|
ಅಪರೋಕ್ಷಕರಿಸಿ ಪ್ರತ್ಯಕ್ಷ ಕಾಣುತ್ತಿರಲು
ಉಪಚಾರವನು ಮಾಡೆ ಜನುಮಾಂತರಕೆ ನಾನು |
ತಪಸಿ ಆದರು ಅವಗೆ ನಮಿಸೇನೊ ನಮಿಸೇನೋ|
ಅಪವರ್ಗವಾಗಲಿ ಸರ್ಗವಾಗಲಿ ಯಮನು|
ಕುಪಿತದಲ್ಲಿ ವೈದು ತಪಿಸಿದರಾದರು|
ಕಪಿಯ ಕೈಯಲ್ಲಿ ಮಣಿಯ ಜಪಮಾಲೆ ಸಿಕ್ಕಂತೆ |
ತಪುತ ಮುದ್ರಾಹೀನ ನಿನ್ನ ನೋಡಿದರೇನು
ಗುಪಿತ ಮಹಿಮ ನಮ್ಮ ಒಡೆಯ ವಿಜಯವಿಠ್ಠಲರೇಯ
ಕೃಪೆ ಮಾಡಿದರೆ ಲೇಸೆ ಮಾಡದಿದ್ದರೆ ಲೇಸೆ ॥ 3 ॥
ಅಟ್ಟತಾಳ
ಶಿವನ ತ್ರಿಶೂಲ ವೈಶ್ರವಣನ್ನ ಖಡ್ಗವು|
ಜವನ ದಂಡವು ವೃದ್ಧ ಶ್ರವಣನ ವಜ್ರಾಯುಧ |
ಪವನ ಸಖನಶಕ್ತಿ ನವವರುಣನ ಪಾ|
ಶವನು ಕೋಪದಲಿ ದಾನವನು ಪಿಡಿದಕುಂ ತಾ|
ದಿವಿಜರು ಮಿಕ್ಕಾದ ನಿವಹ ಕೈದುಗಳಿಂದ |
ತವಕದಿಂದಲಿ ಬಂದು ಅವಘಡಿಸಿದರೆ ನಾ
ನವಕೆ ಭೀತಿಯ ಬಡೆ|
ಪವನ ಮತವನು ಮಾನವನು ತೊರದಿರೆ |
ಅವನ ವಹಿಸಿಕೊಂಡು ಇವರೆಲ್ಲ ಬರಲ್ಯಾಕೆ|
ಪವಮಾನಗತಿ ಪ್ರಿಯ ವಿಜಯವಿಠ್ಠಲ ಕೃಷ್ಣ
ಅವರ ಪ್ರೇರಕ ನಿನ್ನವರ ಪಾಲಕ ನೀನೆ ॥ 4 ॥
ಆದಿತಾಳ
ಹರಿಮುನಿದರೆ ಗುರು ಪರಿಹರಿಸುವನಯ್ಯಾ|
ಗುರು ಮುನಿದಡೆ ಹರಿ ಕಾಯಲರಿಯನೆಂದು ಈ
ಚರಾಚರದಲಿ ಇದೆ ಸ್ಥಿರವಾಗಿ ಇರಲಿಕ್ಕೆ
ಹರಿ ನಿನ್ನ ನೆನೆ ನೆನೆದು ವೃಕೋದರನ ನೆನೆಯದವ |
ಹಿರಿಯನಾದರೆ ಏನು ಕಿರಿಯನಾದರೆ ಏನು|
ತರವಲ್ಲ ಮನ್ನಣಿಗೆ ವರಕೆ ದೂರದು ಕಾಣೊ|
ಸರಿವೆ ಅವನಲ್ಲಿ ಕುಳ್ಳಿರ ಮನವಾಗದು|
ಕರುಣಾವಾರಿಧಿ ನಮ್ಮ ವಿಜಯವಿಠ್ಠಲರೇಯ
ಗುರುವೆ ಪವನನೆಂದು ಬಿರಿದು ಡಂಗುರ ಹೊಯಿವೆ ॥ 5 ॥
ಜತೆ
ಪವನನ್ನ ಮತವಿಡಿದು ನಿನ್ನ ಶ್ರವಣ ಮಾ|
ಡುವರ ಸಂಗ ಪಾಲಿಸು ನಿತ್ಯ ವಿಜಯವಿಠ್ಠಲರೇಯಾ ॥
*******
ಶ್ರೀ ವಿಜಯದಾಸಾರ್ಯ ವಿರಚಿತ ದಾಸದೀಕ್ಷೆ ಸುಳಾದಿ
ಶ್ರೀಮಧ್ವಮತ ಪ್ರಶಂಸನಾಪೂರ್ವಕ ವಾಯುವಂತರ್ಯಾಮಿ ಶ್ರೀಹರಿಯನ್ನೆ ಭಜಿಸುವುದು ಸುಲಭ ಸಾಧನ
ರಾಗ ಶಂಕರಾಭರಣ
ಧ್ರುವತಾಳ
ಹರಿಯೆ ನಿನ್ನಾಧೀನ ಸಕಲ ಜ್ಞಾನೇಂದ್ರಿಯಂಗಳು|
ಹರಿ ನಿನ್ನಾಧೀವ ಸಕಲ ಕರ್ಮೇಂದ್ರಿಯಂಗಳು|
ಹರಿಯೆ ನಿನ್ನಾಧೀನ ಪಂಚಭೂತಾತ್ಮಗಳು|
ಹರಿಯೆ ನಿನ್ನಾಧೀನ ಮನ ಚಿತ್ತಾದಿಗಳು|
ಹರಿಯೆ ನಿನ್ನಾಧೀನ ಸಕಲ ಚೇತನವು|
ಹರಿಯೆ ನಿನ್ನಾಧೀನ ಸರ್ವ ಚೇಷ್ಟೆಗಳು|
ಹರಿಯೆ ನೀ ನೇಮಿಸಿದ ಕಾರಣ ಎನ್ನ|
ಶರೀರದೊಳಗೆ ಎಲ್ಲ ಭರಿತವಾಗಿದೆ|
ಪೊರಗಿದ್ದ ಸರಕು ಬೆಲೆ ಮಾಡಿದಂತೆ ಇದ್ದ |
ಸರಕು ಧನವ ವಿತ್ತು ತುಂಬಲಿಲ್ಲ |
ಶರಣರ ಮೊರೆ ಕೇಳೋ ವಿಜಯವಿಠ್ಠಲರೇಯ |
ಮರದು ಬಿಡುವನಲ್ಲ ಬಿರಿದುಳ್ಳ ದೇವನೆ ॥ 1 ॥
ಮಟ್ಟತಾಳ
ಕುಣಿಸಿದರೆ ಕುಣಿವೆ ನಗಿಸಿದರೆ ನಗುವೆ|
ಮಣಿಸಿದರೆ ದಣಿವೆ ಅಳಿಸಿದರೆ ಅಳುವೆ|
ಉಣಿಸಿದರೆ ಉಣುವೆ ಉಡಿಸಿದರೆ ಉಡುವೆ |
ನೆನಿಸಿದರೆ ನೆನಿವೆ
ಮನುಜ ವೇಷ ಪ್ರೀಯ ವಿಜಯವಿಠ್ಠಲ ಹರಿ|
ನೆನವಿತ್ತರೆ ನೆನೆವೆ ದಣುವಿತ್ತರೆ ದಣುವೆ ॥ 2 ॥
ತ್ರಿವಿಡಿತಾಳ
ತಪುತ ಮುದ್ರಿಗಳಿಲ್ಲದಂಥ ಮಾನವ ನಿನ್ನ|
ಅಪರೋಕ್ಷಕರಿಸಿ ಪ್ರತ್ಯಕ್ಷ ಕಾಣುತ್ತಿರಲು
ಉಪಚಾರವನು ಮಾಡೆ ಜನುಮಾಂತರಕೆ ನಾನು |
ತಪಸಿ ಆದರು ಅವಗೆ ನಮಿಸೇನೊ ನಮಿಸೇನೋ|
ಅಪವರ್ಗವಾಗಲಿ ಸರ್ಗವಾಗಲಿ ಯಮನು|
ಕುಪಿತದಲ್ಲಿ ವೈದು ತಪಿಸಿದರಾದರು|
ಕಪಿಯ ಕೈಯಲ್ಲಿ ಮಣಿಯ ಜಪಮಾಲೆ ಸಿಕ್ಕಂತೆ |
ತಪುತ ಮುದ್ರಾಹೀನ ನಿನ್ನ ನೋಡಿದರೇನು
ಗುಪಿತ ಮಹಿಮ ನಮ್ಮ ಒಡೆಯ ವಿಜಯವಿಠ್ಠಲರೇಯ
ಕೃಪೆ ಮಾಡಿದರೆ ಲೇಸೆ ಮಾಡದಿದ್ದರೆ ಲೇಸೆ ॥ 3 ॥
ಅಟ್ಟತಾಳ
ಶಿವನ ತ್ರಿಶೂಲ ವೈಶ್ರವಣನ್ನ ಖಡ್ಗವು|
ಜವನ ದಂಡವು ವೃದ್ಧ ಶ್ರವಣನ ವಜ್ರಾಯುಧ |
ಪವನ ಸಖನಶಕ್ತಿ ನವವರುಣನ ಪಾ|
ಶವನು ಕೋಪದಲಿ ದಾನವನು ಪಿಡಿದಕುಂ ತಾ|
ದಿವಿಜರು ಮಿಕ್ಕಾದ ನಿವಹ ಕೈದುಗಳಿಂದ |
ತವಕದಿಂದಲಿ ಬಂದು ಅವಘಡಿಸಿದರೆ ನಾ
ನವಕೆ ಭೀತಿಯ ಬಡೆ|
ಪವನ ಮತವನು ಮಾನವನು ತೊರದಿರೆ |
ಅವನ ವಹಿಸಿಕೊಂಡು ಇವರೆಲ್ಲ ಬರಲ್ಯಾಕೆ|
ಪವಮಾನಗತಿ ಪ್ರಿಯ ವಿಜಯವಿಠ್ಠಲ ಕೃಷ್ಣ
ಅವರ ಪ್ರೇರಕ ನಿನ್ನವರ ಪಾಲಕ ನೀನೆ ॥ 4 ॥
ಆದಿತಾಳ
ಹರಿಮುನಿದರೆ ಗುರು ಪರಿಹರಿಸುವನಯ್ಯಾ|
ಗುರು ಮುನಿದಡೆ ಹರಿ ಕಾಯಲರಿಯನೆಂದು ಈ
ಚರಾಚರದಲಿ ಇದೆ ಸ್ಥಿರವಾಗಿ ಇರಲಿಕ್ಕೆ
ಹರಿ ನಿನ್ನ ನೆನೆ ನೆನೆದು ವೃಕೋದರನ ನೆನೆಯದವ |
ಹಿರಿಯನಾದರೆ ಏನು ಕಿರಿಯನಾದರೆ ಏನು|
ತರವಲ್ಲ ಮನ್ನಣಿಗೆ ವರಕೆ ದೂರದು ಕಾಣೊ|
ಸರಿವೆ ಅವನಲ್ಲಿ ಕುಳ್ಳಿರ ಮನವಾಗದು|
ಕರುಣಾವಾರಿಧಿ ನಮ್ಮ ವಿಜಯವಿಠ್ಠಲರೇಯ
ಗುರುವೆ ಪವನನೆಂದು ಬಿರಿದು ಡಂಗುರ ಹೊಯಿವೆ ॥ 5 ॥
ಜತೆ
ಪವನನ್ನ ಮತವಿಡಿದು ನಿನ್ನ ಶ್ರವಣ ಮಾ|
ಡುವರ ಸಂಗ ಪಾಲಿಸು ನಿತ್ಯ ವಿಜಯವಿಠ್ಠಲರೇಯಾ ॥
**********