Showing posts with label ಇಂದೆನ್ನ ಜನ್ಮ ಪಾವನ ವಾಯಿತು ತಂದೆ ಶ್ರೀ ಗುರು ankita mahipati. Show all posts
Showing posts with label ಇಂದೆನ್ನ ಜನ್ಮ ಪಾವನ ವಾಯಿತು ತಂದೆ ಶ್ರೀ ಗುರು ankita mahipati. Show all posts

Saturday, 1 May 2021

ಇಂದೆನ್ನ ಜನ್ಮ ಪಾವನ ವಾಯಿತು ತಂದೆ ಶ್ರೀ ಗುರು ankita mahipati

 ಇಂದೆನ್ನ ಜನ್ಮ ಪಾವನ ವಾಯಿತು । 

ತಂದೆ ಶ್ರೀ ಗುರು ನಿಮ್ಮ 

ಚರಣ ದರುಶನದಿ ।। ಪಲ್ಲವಿ ।। 


ಅರ್ಕ ಮಂಡಲಗಳು 

ರವಿ ಶಶಿ ಕಿರಣವು । 

ಝಳ ಝಳಿಸುವ ಪ್ರಭೆ ನೋಡಿ 

ಅನಿಮಿಷದಾ ದೃಷ್ಟಿಲೆನ್ನ । 

ಲಕ್ಷ್ಮಿಯೊಳು ಸಾಕ್ಷಾತ್ವಸ್ತು 

ಗತಿತು ನಿಮ್ಮ । 

ಪ್ರಕಾಶವನು ಕಂಡ೦-

ಧತ್ವಗಳು ।। ಚರಣ ।। 


ಓಂಕಾರ ಮೊದಲಾದ 

ದ್ವಾದಶ ನಾದದಾ । 

ಭೇದದಾ ಘೋಷವನು 

ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ । 

ಲಯ ಲೇಲೆಯೊಳು ಸಾದೃಶ್ಯ 

ಮೂರ್ತಿಯು ನಿಮ್ಮ । 

ಶ್ರುತಿಗಳು ಕೇಳಿ ಬಧಿ-

ರತವಾಗಳಿದಿನ್ನು ।। ಚರಣ ।। 


ಇಪ್ಪತ್ತೊಂದು ಸಾವಿರ 

ಆರು ನೂರುದಾ । 

ಜಪವನ್ನು ತಿಳಿದು 

ಪ್ರಣಮ್ಯಲೆನ್ನ । 

ಸುಷುಮ್ನದೊಳು 

ಪ್ರಾಣೇಶ ಮೂರ್ತಿ ನಿಮ್ಮ । 

ಮಂತ್ರವನ್ನು ತಿಳಿದು 

ಪಿಶಾಚತ್ವ ಕಳೆದಿನ್ನು ।। ಚರಣ ।। 


ಸ್ತುತಿ ಸ್ತೌತ್ಯ ಸ್ಮರಿಸುವ 

ದಿವ್ಯ ನಾಮಾಮೃತವ । 

ನುಡಿದು ಪಯಸ್ವಿನೀ 

ಜಿಹ್ವೆಲೆನ್ನ । 

ಸ್ಮರಣೆ ಚಿಂತನೆಯೊಳು 

ಸ್ಥುರಣ ಮೂರ್ತಿ ನಿಮ್ಮ । 

ಸ್ಮರಿತ ಗತಿವರಿತು 

ಮೂಕತ್ವ ಕಳೆದಿನ್ನು ।। ಚರಣ ।। 


ಚಿನ್ಮಯ ಚಿದ್ರೂಪ 

ಕಂಡು ಬೆರಗಾಗಿ ಮನ ।

ಭ್ರಾಂತಿ ಅಜ್ಞಾನವನ್ನು 

ಜರಿಯಲೆನ್ನ । 

ಏಕೋದೇವ ಈತ 

ವಿಶ್ವಾತ್ಮ ಹಂಸನೆಂದು । 

ಸಂದೇಹ ಸಂಕಲ್ಪ

ಬಾಧೆಯಾಗಳದಿನ್ನು ।। ಚರಣ ।। 


ಭುಕ್ತಿ ಮುಕ್ತಿ ಉದಾರಿ 

ಆತ್ಮದಲಿ ಸಾರಿ ದಾರಿ । 

ನಿಜ ಬೋಧಾಮೃತ

 ಬೆರೆದು ತಾರಿಸಲೆನ್ನ । 

ಗರ್ಭಪಾಶದ ಬಲಿಯು 

ಹರಿದು ಧರೆಯೊಳಿನ್ನು । 

ಉತ್ಪತ್ತಿ ಸ್ಥಿತಿ ಲಯದ 

ಬೀಜವನ್ನು ಹುರಿದಿನ್ನು ।। ಚರಣ ।। 


ಭಾಸ್ಕರ ಸ್ವಾಮಿಯ 

ಕಾರುಣಾಳು ಮೂರ್ತಿಯ । 

ಮೂಢ ಮಹೀಪತಿಯ 

ಕೃಪಾಂಬುಧಿಯು । ಕರು । 

ನದಭಯ ಹಸ್ತವನು 

ಶಿರದಲ್ಲಿಡಲಾಗಿ । 

ಧನ್ಯನಾದೆನು ಸತಿಪತಿ

ಸಹಿತವಾಗಿನ್ನು ।।

****


ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ 

ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 

ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 

ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 

ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 

ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 

ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 

ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7

***