Showing posts with label ರಘುಪತಿಯಾ ತೋರಮ್ಮಾ ರಾಜೀವಾಂಬರೆ ಬಾರಮ್ಮಾ gurumahipati. Show all posts
Showing posts with label ರಘುಪತಿಯಾ ತೋರಮ್ಮಾ ರಾಜೀವಾಂಬರೆ ಬಾರಮ್ಮಾ gurumahipati. Show all posts

Wednesday, 1 September 2021

ರಘುಪತಿಯಾ ತೋರಮ್ಮಾ ರಾಜೀವಾಂಬರೆ ಬಾರಮ್ಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ರಘುಪತಿಯಾ ತೋರಮ್ಮಾ | ರಾಜೀವಾಂಬರೆ ಬಾರಮ್ಮಾ ಪ 


ಭಕುತರಾ - ಭೀಷ್ಟೇಯನು | ಪೂರಿಸುವನಾ ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ || ಸದ್ಗುಣ ಧಾಮನಾ | ದಶರಥ ರಾಮನಾ 1 

ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ || ಅಸಮಧನು ವನೆತ್ತ್ಯಭಯವಿತ್ತನಾ | ನಿನಗೊಲಿದಾತನಾ | ರಘುಕುಲಜಾತನಾ 2 

ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ 3

***