Showing posts with label ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ narahari P. Show all posts
Showing posts with label ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ narahari P. Show all posts

Thursday, 5 August 2021

ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ


ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿ ಅ.ಪ


ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ

ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1


ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ

ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2


ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ

ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3

***