Showing posts with label ಹರಿಎನ್ನು ಹರಿಎನ್ನು ಹರಿ ಎನ್ನು ಮನವೆ gopalakrishna vittala. Show all posts
Showing posts with label ಹರಿಎನ್ನು ಹರಿಎನ್ನು ಹರಿ ಎನ್ನು ಮನವೆ gopalakrishna vittala. Show all posts

Monday, 2 August 2021

ಹರಿಎನ್ನು ಹರಿಎನ್ನು ಹರಿ ಎನ್ನು ಮನವೆ ankita gopalakrishna vittala

ಹರಿ ಎನ್ನು ಹರಿ ಎನ್ನು ಹರಿ ಎನ್ನು ಮನವೆ ಪ.

ನಿರುತದಿ ಪೊರೆವನ ಮರೆವರೆ ಮನವೆ ಅ.ಪ.

ಸರಿಯುವುದು ಆಯುಷ್ಯ ಸಂಪತ್ತು ನೋಡು

ಬರುತಿದೆ ಮೃತ್ಯುವು ಕರೆಯಲು ನೋಡು

ಹರಿನಾಮ ಯಮದಂಡ ಕಡಿವುದು ನೋಡು

ಪರಮಪುರುಷನ ನೀ ಬಿಡದೆ ಕೊಂಡಾಡು 1

ಹರಿಯ ನಾಮಾಮೃತ ಸುಜನಕೆ ನೀಡು

ಹರಿಯ ಜ್ಞಾನಾನಂದಾಂಬುಧಿಯೊಳೊಲ್ಯಾಡು

ಹರಿಯ ಮೂರುತಿಯನ್ನು ಮನದಲ್ಲಿ ನೋಡು

ಹರಿಭಕ್ತಿ ಮದವೇರಿ ಕುಣಿ ಕುಣಿದಾಡು 2

ಹರಿಗುರು ಸ್ಮರಣೆಯ ನಿರುತದಿ ಮಾಡು

ಹರಿಭಕ್ತಿ ಲಾಂಛನ ಮೈಯಲ್ಲಿ ಮೂಡು

ಹರಿದಾಸ ಸಂಪತ್ತಿನೊಳಗೆ ಓಲಾಡು

ಹರಿಯ ಮನದಿ ಕಂಡು ನಲಿನಲಿದಾಡು 3

ಕಾಮಕ್ರೋಧಗಳನ್ನು ಖಂಡಿಸೀಡ್ಯಾಡು

ನೇಮ ಶ್ರೀ ಗುರು ಆಜ್ಞೆಯಂದದಿ ಮಾಡು

ಯಾಮ ಯಾಮಕೆ ಹರಿನಾಮವ ಪಾಡು

ಶ್ರೀಮದಾನಂದತೀರ್ಥರ ಮತ ನೋಡು 4

ಶ್ರೀ ಪರಮಾತ್ಮನ ಗುಣವ ಕೊಂಡಾಡು

ಶ್ರೀಪತಿ ಭಕ್ತರ ಸಂಗದಿ ಕೂಡು

ಶ್ರೀ ಪದ್ಮ ಭವ ಹರ ಸ್ತುತಿ ಮಾಡು

ಗೋಪಾಲಕೃಷ್ಣವಿಠ್ಠಲನ ದಯ ಬೇಡು 5

****