ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ ಧೃಢ ಭಕ್ತಿ ಸುಜ್ಞಾನವನ್ನು ತಡಮಾಡದಲೆ ಕೊಡುವೋ ತನಕ ||ಅ||
ಹಸ್ತವ ಮ್ಯಾಲಕೆ ಎತ್ತಿದರೇನು ಹಾರಗಾಲ ಹಾಕಿದರೇನು ಭೃತ್ಯನು ನಿನ್ನವನು ನಾನು ಹಸ್ತಿ ವರದನ ತೋರೋ ತನಕ ||೧||
ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲ ಫುಲ್ಲನಾಭ ಲಕುಮಿಲೋಲನ ಇಲ್ಲಿಗೆ ತಂದು ತೋರುವ ತನಕ ||೨||
ಡೊಂಕು ಮೋರೆ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ ಕಿಂಕರನು ನಿನ್ನವನೋ ನಾನು ವೆಂಕಟವಿಠಲ ನ ತೋರುವ ತನಕ ||೩||
************