Showing posts with label ನೋಡಿದೆ ಗುರುಗಳ ನೋಡಿದೇ vijaya vittala NODIDE GURUGALA NODIDE. Show all posts
Showing posts with label ನೋಡಿದೆ ಗುರುಗಳ ನೋಡಿದೇ vijaya vittala NODIDE GURUGALA NODIDE. Show all posts

Thursday, 17 October 2019

ನೋಡಿದೆ ಗುರುಗಳ ನೋಡಿದೇ ankita vijaya vittala NODIDE GURUGALA NODIDE

 ರಾಗ ಭೈರವಿ   ಆದಿತಾಳ 
Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 


ನೋಡಿದೇ ಗುರುಗಳ ನೋಡಿದೇ ॥ ಪ ॥
ನೋಡಿದೆನು ಗುರು ರಾಘವೇಂದ್ರರ ।
ಮಾಡಿದೆನು ಭಕುತಿಯಲಿ ವಂದನೆ ।
ಬೇಡಿದೆನೊ ಕೊಂಡಾಡಿ ವರಗಳ । 
ಈಡು ಇಲ್ಲದ ಮೆರೆವ ಮಹಿಮೆಯ ॥ ಅ ಪ ॥

ಮೊದಲು ಗಾಂಗೆಯ ಶಯ್ಯಜನು ಈ ।
ನದಿಯ ತೀರದಿ ಇಲ್ಲಿ ಯಾಗವ ।
ಮುದದಿ ರಚಿಸಿ ಪೂರೈಸಿ ಪೋಗಿರ ।
ಲದನೆ ತನ್ನೊಳಗರಿತು ತವಕದಿ ॥
ಹೃದಯ ನಿರ್ಮಲರಾಗಿ ರಾಗದಿ ।
ಬುಧಜನರ ಸಮ್ಯಾಳದಲಿ ಸಿರಿ ।
ಸದನನಂಘ್ರಿಗಳ ನೆನೆದು ಕಳೆವರ ।
ಉದಿತ ಭಾಸ್ಕರನಂತೆ ಇಟ್ಟದು ॥ 1 ॥

ಅಲವಬೋಧ ಮಿಕ್ಕಾದ ಮಹಮುನಿ - ।
ಗಳು ಸಾಂಶರು ಒಂದೊಂದು ರೂಪದಿ ।
ನೆಲೆಯಾಗಿ ನಿತ್ಯದಲಿ ಇಪ್ಪರು ।
ವೊಲಿಸಿಕೊಳುತಲಿ ಹರಿಯ ಗುಣಗಳ ॥
ತಿಳಿಸಿ ತಿಳಿವರು ತಮತಮಗಿಂದಧಿಕ ।
ರಲಿ ಉಪದೇಶ ಮಾರ್ಗದಿ ।
ಕಲಿಯುಗದೊಳಗಿದೇ ಕೇವಲ ಕ - ।
ತ್ತಲೆಯ ಪರಿಸುವ ಸೊಬಗು ಸಂತತಾ ॥ 2 ॥

ರಾಮನರಹರಿ ಕೃಷ್ಣ ಕೃಷ್ಣರ ।
ನೇಮದಿಂದೀ ಮೂರ್ತಿಗಳ ಪದ ।
ತಾಮರಸ ಭಜನೆಯನು ಮಾಡುವ । 
ಕೋಮಲಾಂಗನು ಕಠಿಣ ಪರವಾದಿ ॥
ಸ್ತೋಮಗಳ ಮಹಮಸ್ತಕಾದ್ರಿಗೆ ।
ಭೂಮಿಯೊಳು ಪವಿಯೆನಿಸಿದ ಯತಿ ।
ಯಾಮ ಯಾಮಕೆ ಎಲ್ಲರಿಗೆ ಶುಭ ।
ಕಾಮಿತಾರ್ಥವ ಕರೆವನಂದವ ॥ 3 ॥

ನೂರು ಪರ್ವತ ವರುಷ ಬಿಡದಲೆ । 
ಚಾರು ವೃಂದಾವನದಲಿ ವಿ - ।
ಸ್ತಾರ ಆರಾಧನೆಯು ತೊಲಗದೆ ।
ವಾರವಾರಕೆ ಆಗುತಿಪ್ಪದು ॥
ಸಾರೆ ಕಾರುಣ್ಯದಲಿ ಲಕುಮಿ ।
ನಾರಾಯಣ ತಾ ಚಕ್ರ ರೂಪದಿ ।
ಸಾರಿದವರಘ ಕಳೆದು ಇವರಿಗೆ ।
ಕೀರುತಿಯ ತಂದಿತ್ತದನುದಿನ ॥ 4 ॥

ಮಿತವೆ ಎನದಿರಿ ಇಲ್ಲಿ ದಿನದಿನ - । 
ಕತಿಶಯವೆ ಆಗುವದು ಭೂಸೂರ ।
ತತಿಗೆ ಭೋಜನ ಕಥಾ ಶ್ರವಣ ಭಾ - ।
ರತ ಪುರಾಣಗಳಿಂದಲೊಪ್ಪುತ ॥
ಕ್ಷಿತಿಯೊಳಗೆ ಮಂತ್ರಾಲಯ ಗ್ರಾಮಕೆ । ಪ್ರತಿಯಿಲ್ಲವೆಂದೆನಿಸಿಕೊಂಬದು ।
ಪತಿತಪಾವನ ವಿಜಯವಿಠಲನ । 
ತುತಿಸಿಕೊಳುತಲಿ ಮೆರೆವ ಮುನಿಗಳ ॥ 5 ॥
***

Nodide – gurugala nodide
Nodidenu gururagavendrara
Madidenu Bakutiyali vandane
Bedidenu kondadi varagala
Idu illade koduva gurugala
Modalu gangeya Sayyajanu I

Nadiya tiradalilli yagava
Mudadi racisi puraisi pogira-
Ladanu tammolu tilidu tavakadi
Hrudaya nirmalaragi ragadi
Budhajanara sammeladali siri-
Sadanangriya tilidu nenevara
Udita baskaranante polevara || 1 ||

Alavabodha mikkada mahamuni
Galu samsaru ondu rupadi
Neleyagi nityadali ipparu
Olisikolutali hariya gunagala
Tilidu tilisuta tamma tamagin-
Dadhikarindupadesamargadi
Kaliyugadolu kevala kattaleya
Harisuva sobaga santata || 2 ||

Rama narahari krushna krushnara
Nemadindi murtigala pada
Tamarasa Bajaneyanu malparu
Komalangaru kathinaparavadi
Stomagala mastakadrige
Bumiyolu paviyenisida yati
Yama yamake ellarige suba
Kamitarthava kareva gurugala || 3 ||

Nuru parvata varusha bidadale
Caru vrundavanadali vi
Stara aradhaneyu tolagade
Vara varake Agutippudu
Sare karunyadali lakumi
Narayana ta cakrarupadi
Saridavaraga kaledu ivarige
Kirutiya tandippudanudina || 4 ||

Mitavu enadiri illi dinadina
Katisayave Aguvudu busura
Tatige bojana kathasravana ba
Ratapuranagalindalopputa
Kshitiyolage mancale gramake
Pratiyu illavendenisikobudu
Patita pavana vijayaviththalana
Tutisikolluta mereva gurugala || 5 ||
***

ನೋಡಿದೆ – ಗುರುಗಳ ನೋಡಿದೆ
ನೋಡಿದೆನು ಗುರುರಾಘವೇ೦ದ್ರರ
ಮಾಡಿದೆನು ಭಕುತಿಯಲಿ ವ೦ದನೆ
ಬೇಡಿದೆನು ಕೊ೦ಡಾಡಿ ವರಗಳ
ಈಡು ಇಲ್ಲದೆ ಕೊಡುವ ಗುರುಗಳ

ಮೊದಲು ಗಾ೦ಗೇಯ ಶಯ್ಯಜನು ಈ
ನದಿಯ ತೀರದಲಿಲ್ಲಿ ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ-
ಲದನು ತಮ್ಮೊಳು ತಿಳಿದು ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೇಳದಲಿ ಸಿರಿ-
ಸದನ೦ಘ್ರಿಯ ತಿಳಿದು ನೆನೆವರ
ಉದಿತ ಭಾಸ್ಕರನ೦ತೆ ಪೊಳೆವರ                  || ೧ ||

ಅಲವಬೋಧ ಮಿಕ್ಕಾದ ಮಹಮುನಿ
ಗಳು ಸಾ೦ಶರು ಒ೦ದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ ತಮ್ಮ ತಮಗಿ೦-
ದಧಿಕರಿ೦ದುಪದೇಶಮಾರ್ಗದಿ
ಕಲಿಯುಗದೊಳು ಕೇವಲ ಕತ್ತಲೆಯ
ಹರಿಸುವ ಸೊಬಗ ಸ೦ತತ                          || ೨ ||

ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿ೦ದೀ ಮೂರ್ತಿಗಳ ಪದ
ತಾಮರಸ ಭಜನೆಯನು ಮಾಳ್ಪರು
ಕೋಮಲಾ೦ಗರು ಕಠಿಣಪರವಾದಿ
ಸ್ತೋಮಗಳ ಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮ ಯಾಮಕೆ ಎಲ್ಲರಿಗೆ ಶುಭ
ಕಾಮಿತಾರ್ಥವ ಕರೆವ ಗುರುಗಳ                    || ೩ ||

ನೂರು ಪರ್ವತ ವರುಷ ಬಿಡದಲೆ
ಚಾರು ವೃ೦ದಾವನದಲಿ ವಿ
ಸ್ತಾರ ಆರಾಧನೆಯು ತೊಲಗದೆ
ವಾರ ವಾರಕೆ ಆಗುತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ
ನಾರಾಯಣ ತಾ ಚಕ್ರರೂಪದಿ
ಸಾರಿದವರಘ ಕಳೆದು ಇವರಿಗೆ
ಕೀರುತಿಯ ತ೦ದಿಪ್ಪುದನುದಿನ                     || ೪ ||

ಮಿತವು ಎನದಿರಿ ಇಲ್ಲಿ ದಿನದಿನ
ಕತಿಶಯವೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಬಾ
ರತಪುರಾಣಗಳಿ೦ದಲೊಪ್ಪುತ
ಕ್ಷಿತಿಯೊಳಗೆ ಮ೦ಚಾಲೆ ಗ್ರಾಮಕೆ
ಪ್ರತಿಯು ಇಲ್ಲವೆ೦ದೆನಿಸಿಕೊಬುದು
ಪತಿತ ಪಾವನ ವಿಜಯವಿಠ್ಠಲನ
ತುತಿಸಿಕೊಳ್ಳುತ ಮೆರೆವ ಗುರುಗಳ               || ೫ ||

*******