RSS song
ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ |
ನಾಂ ಬರೆಯಬಲ್ಲೆನೆ ನಾನು ಕವಿಯು |
ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು |
ನಾನ್ ತಪಿಸುತಿಹೆ ಹೇಳಲಾವ ಪರಿಯು || |ಪ||
ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ
ಆಷ್ಟ್ರರಾಷ್ಟ್ರಗಳ ಸ್ವಾತಂತ್ರ ಸೆಳೆಯುತ
ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ || ||೧||
ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ
ಮೂರಕ್ಷರದೊಳೇನು ಮಾಟವಿಹುದೋ |
ಸ್ವಾತಂತ್ರ್ಯ ಯಜ್ಞದೊಳು ಬಂದೆನ್ನ ಬಂಧುಗಳ
ಮುದಿತ ಲೇಖನಿ ಬೇಕು ರಕ್ತವದಕೆ ಮಸಿ || ||೨||
ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿ
ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ
ಎಮ್ಮೊಂದಿಗರ ಬದುಕು ಬಾಳಾಗಿ ಬೆಳಗಿಸಲು
ಬಲಿತ ಲೇಖನಿ ಬೇಕು ರಕ್ತವದಕೆ ಮಸಿ || ||೩||
***
ennedeya bisirakta kudikudisi masimADi |
nAM bareyaballene nAnu kaviyu |
viSva jananiya garBa mAtRuBUmiya basiru |
naan tapisutihe hELalAva pariyu || |pa||
durbalara mardisuta paSubaladi vardhisuta
RAShTrarAShTragaLa svAtaMtra seLeyuta
sulige saMskRutiyeMdu tiLidiruva pApigaLa
muriva lEKani bEku raktavadake masi || ||1||
svAtaMtrya svAtaMtrya svAtaMtrya svAtaMtrya
mUrakSharadoLEnu mATavihudO |
svAtaMtrya yaj~jadoLu baMdenna baMdhugaLa
mudita lEKani bEku raktavadake masi || ||2||
enna hRudayada spUrti enna janateya Sakti
enna nADina kIrti heccisalke
emmoMdigara baduku bALAgi beLagisalu
balita lEKani bEku raktavadake masi || ||3||
***
ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ |
ನಾಂ ಬರೆಯಬಲ್ಲೆನೆ ನಾನು ಕವಿಯು |
ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು |
ನಾನ್ ತಪಿಸುತಿರೆ ಹೇಳಲಾವ ಪರಿಯು | ||ಪ||
ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ
ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ
ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ ||೧||
ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ
ಮೂರಕ್ಷರದೊಳದೇನು ಮಾಟವಿಹುದೋ
ಸ್ವಾತಂತ್ರ್ಯ ಯಜ್ಞದೊಳು ಬಂದೆನ್ನ ಬಂಧುಗಳ
ಮುದಿತ ಲೇಖನಿ ಬೇಕು ರಕ್ತವದಕೆ ಮಸಿ ||೨||
ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿ
ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ
ಎಮ್ಮೂಂದಿಗರ ಬದುಕು ಬಾಳಾಗಿ ಬೆಳಗಿಸಲು
ಬಲಿತ ಲೇಖನಿ ಬೇಕು ರಕ್ತವದಕೆ ಮಸಿ ||೩||
***