Showing posts with label ಗುರುನಾರಪ್ಪಯ್ಯನ ಚರಣಕಮಲಯುಗ್ಮ karpara narahari yogi narayana acharya stutih. Show all posts
Showing posts with label ಗುರುನಾರಪ್ಪಯ್ಯನ ಚರಣಕಮಲಯುಗ್ಮ karpara narahari yogi narayana acharya stutih. Show all posts

Monday, 2 August 2021

ಗುರುನಾರಪ್ಪಯ್ಯನ ಚರಣಕಮಲಯುಗ್ಮ ankita karpara narahari yogi narayana acharya stutih

ಗುರು ನಾರಪ್ಪಯ್ಯನ ಚರಣಕಮಲಯುಗ್ಮ

ನಿರುತ ಸ್ಮರಿಸೆಲೊ ಮಾನವ ಪ


ನಿರುತ ಸ್ಮರಿಸುವ ಶರಣು ಜನರಘ-

ತರಿದಭೀಷ್ಠೆಯ ಗರಿಯಲೋಸುಗ

ಧರಣಿ ವಲಯದಿ ಮೆರೆವ ವೆಂಕಟ

ಗಿರಿಯ ರಮಣನ ಕರೆದು ತಂದಿಹ ಅ.ಪ


ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ

ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ

ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ

ಧರಣಿ ದೇವನೆ ನಿನಗೆ ದರುಶನ ಕೊಡಲು ನಾ

ಬರುವೆನೆಂದಾe್ಞÁಪಿಸಿ ಭಕ್ತನನುಸರಿಸಿ

ತುರುಸ್ವರೂಪವ ಧರಿಸಿ ಬರುತಿರೆ

ಕುರಿಕಿಹಳ್ಳಿಯ ಗ್ರಾಮದಿಂದಲಿ

ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ

ಕರೆದು ತಂದಿಹ 1


ನಾರಾಯಣಾರ್ಯರು ಕಾರ್ಪರಾರಣ್ಯದಿ

ಆರಾಧಿಸುತಲಿರುತ ಆರಾರು ಭಕುತರು

ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ

ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು

ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ

ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ

ಭಾರತೀಶನ ಮೂರುತಿಯ ಬರೆದೀತ ಭಯ ಪರಿ-

ಹಾರಕನು ನಿಮಗೆಂದು ಪೇಳಿದ 2


ಧರಣಿ ಪಾಲಕನಿಂದ ನಿರ್ಮಿತಮಾದ ಬಂ-

ಧುರ ನಿಲಯದಿ ರಾಜಿತ ತರುಮೂಲದೊಳಗವ-

ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ

ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು

ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ

ತಿರುಮಲೇಶನ ಮೂರ್ತಿ ಸಹಿತದ

ನಿರುತ ಪೂಜೆಯಕೊಳುತ ಧರೆಯೊಳು

ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3

****