..
kruti by Srida Vittala Dasaru Karjagi Dasappa
ಬೇಡುವುದೂ ಬಲು ಕಷ್ಟ ಪ
ನೀಡದಿದ್ದವನೇ ನಷ್ಟ ಅ.ಪ.
ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು 1
ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ 2
ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು 3
ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ 4
ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು 5
***