ರಾಗ: ಭೂಪಾಳಿ ತಾಳ: ಝಂಪೆ
ಏಳಯ್ಯ ಗುರುವೆ ಬೆಳಗಾಯಿತು
ಏಳಯ್ಯ ಗುರುರಾಯ ಏಳಯ್ಯ ಶುಭಕಾಯ
ಏಳು ಮಹರಾಯ ಏಳು ಎನ ಜೀಯಾ ಪ
ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ ಅ.ಪ
ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು
ಸದಮಲ ಬುಧರೆಲ್ಲ ಮುದದಿಂದಲಿ ಎದ್ದು
ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ
ಸದನಕ್ಕೆ ತಾವ್ ಬಂದು ಪದುಮನಾಭನ ಭಜಿಸಿ
ಪಾದೋದಕವನೆ ಧರಿಸಿ ಸದಯ ನಿನ್ನ ಪಾದ-
ಸಂದರುಶನಕೆ ಬಂದಿಹರೋ 1
ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು
ಚಿತ್ತ ಶುದ್ಧಿಯಲಿಂದ ಉತ್ತಮಾರ್ಹಣಗಳು ತಮ್ಮ
ನೆತ್ತಿಯಿಂದ ಪೊತ್ತು ಸುತ್ತು ಸಂದಣಿಯಿಂದ
ಜತ್ತಾಗಿ ನಿಂತಿಹರು ಉತ್ತಮಾ ನಿನ್ನ ನಿದ್ರೆಯ
ಹೊತ್ತು ಮೀರಾಯ್ತು ತೊತ್ತಿಗರೆಲ್ಲರು ಪಾದ
ಒತ್ತಿ ಬೋಧಿಸುವರು ಚಿತ್ತಕ್ಕೆ ತಂದು ತ್ವರಿತದಿ ಏಳು 2
ವಿಮತಾದ್ರಿ ಕುಲಿಶನೆ ವಿಮಲಗಾತ್ರನೆ ಏಳು
ನಮಿಪ ಜನರಾರ್ಥ ದಾತ ದಿವಿಜದ್ರುಮನೆ
ಪ್ರೇಮವಾರಿಧಿ ಎಳು ತಾಮರಸಾಂಬಕನೆ ಏಳು ಶ್ರೀ
ರಾಮ ಪಾದ ಭೃಂಗನೆ ಏಳು ಗೋಮತಿ ಕುಮುದ
ಸೋಮ ಸಾಂದ್ರನೆ ಏಳು ಯಾಮ ಮೀರಿತು ವಿಶ್ವನಿಯಾಮಕ ದೂತನೇ
ಸಾಮಗಾಯನ ಲೋಲ ರಮಾವಲ್ಲಭನಪ್ರೀಯ ಗುರುರಾಜವರ್ಯ 3
ಮೌನಿಕುಲರನ್ನ ಮಾನ ನಿಧಿಯೇ ಎನ್ನ
ಬಿನ್ನಪವ ಕೇಳಯ್ಯ ಜೀಯಾ ನಿನ್ನ ಬೋಧಿಪ-
ಕನ್ಯಜನರುಂಟೆ ನಿನ್ನಿಂದ ನೀ ಚನ್ನಾಗಿ ಏಳೊ
ಮುನÀ್ನ ಮಹ ಕಾರ್ಯಂಗಳು ಘನ್ನವಾಗಿರುತಿಹವು
ನಿನ್ಹೊರತು ಇನ್ನಾರು ಮಾಳ್ಪರು ಎನ್ನ ನುಡಿ ಈಗ
ಚನ್ನಾಗಿ ಮನದಿ ತಂದು ಮನ್ನಿಸಿ ಪೊರೆಯೊ ಧೊರೆಯೆ 4
ದಾತ ಈ ಜನಜಾತಿ ಸಾಕÀಲಾರದೆ ಸೋತು ಮಲಗಿದೆಯಾ
ಪಾತಕಾಂಬುಧಿ ಪೋತನೆ ಮಾತರಿಶ್ವನ ತಾತ ಸೀತಾನಾಥನ ಪಾದ
ಪಾಥ ಭವ ಯುಗ್ಮದಲಿ ಸಂಜಾತವಾಗಿಹ ಸುಧಾ-
ಪೀತ ಕಾರಣ ಮದ ಸಂಭೂತದಿಂ ಮಲಗಿದೆಯಾ
ಭೂತನಾಥನ ಗುರುಜಗನ್ನಾಥವಿಠಲನ
ದೂತ ನಾನೆಂಬ ಗರುವಿಂದ ಮಲಗಿದೆಯಾ 5
***