Showing posts with label ಭಾರತೀ ವರ ಪಾಹಿಮಾಂ ಟೊಣ್ಣೂರು karpara narahari. Show all posts
Showing posts with label ಭಾರತೀ ವರ ಪಾಹಿಮಾಂ ಟೊಣ್ಣೂರು karpara narahari. Show all posts

Monday 2 August 2021

ಭಾರತೀ ವರ ಪಾಹಿಮಾಂ ಟೊಣ್ಣೂರು ankita karpara narahari

ಭಾರತೀವರ ಪಾಹಿಮಾಂ ಟೊಣ್ಣೂರು

ಮಂದಿರ ಕರುಣಾಕರ ಪ


ಸೇರಿದವರ ದುರಿತ ಘನ ಸಮೀರ

ಸುರವರ ಮಾಮುದ್ಧರ ಅ.ಪ


ನೂರುಯೋಜನದುದಧಿ ಲಂಘಿಸಿ ಧಾರುಣಿ

ಸುತೆಯಾ ಶುಭವಾರ್ತೆಯಾ

ಶ್ರೀರಾಮನಿಗರುಹಿದ ಬಲುಶೂರ

ಬಿಡಿಸಯ್ಯ ಸಂಸೃತಿ ಭಯ 1


ಕ್ರೂರದ್ವೈತರ ಮಥನದಿ ಕಂಸಾರಿ ಕರುಣವ

ಪಡೆದಿಯೊ ಜವ

ಕೌರವಾಂತಕ ನೀಡೋ ಮನದಿ ಶೌರಿ ಚರಣವ

ನೋಳ್ಪ ಸುಖವ2


ಧೀರ ಕಾರ್ಪರ ನಾರಸಿಂಹ ನಾಪಾರ

ಮಹಿಮೆಯ ತಿಳಿವ ಬಗೆಯ

ಸಾರ ಶಾಸ್ತ್ರದಿ ಪೇಳಿದ ಸುಖತೀರಥಾಹ್ವಯ

ಕೊಡು ಸುಮತಿಯ 3

****