Showing posts with label ಜಗಕೆ ಶಾಂತಿಯನೀವ ಜಗನ್ನಾಥನೇ ನಿನ್ನ ಬಗೆಯರಿತ gopalakrishna vittala. Show all posts
Showing posts with label ಜಗಕೆ ಶಾಂತಿಯನೀವ ಜಗನ್ನಾಥನೇ ನಿನ್ನ ಬಗೆಯರಿತ gopalakrishna vittala. Show all posts

Sunday, 1 August 2021

ಜಗಕೆ ಶಾಂತಿಯನೀವ ಜಗನ್ನಾಥನೇ ನಿನ್ನ ಬಗೆಯರಿತ ankita gopalakrishna vittala

ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ

ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ.


ನಾನಾ ಇಂದ್ರಿಯಗಳಿಗೆÀ ನೀನೇ ಪ್ರೇರಕನಾಗಿ

ನಾನಾ ವಿಧ ಸುಖದುಃಖ ತಗಲಿಸುತ ಮನಕೇ

e್ಞÁನವಂತರ ಹೃದಯ ವಾಸನಾಗಿರುತಿರ್ದು

ಮಾನಿತರ ಬಳಲಿಸುವ ಕಾರಣವದೇನೈ 1

ಭೂಸುರÀರ ಮನಕ್ಲೇಶ ನಾಶಗೈಸುತ ಸತತ

ಪೋಷಿಸೆಲೊ ಸ್ವಾಮಿ ಸಂತೋಷವಿತ್ತು

ನಾಶರಹಿತನೆ ಭಕ್ತರಾಶೆ ಪೂರೈಪ ಗುಣ

ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ2

ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ

ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ

ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ

ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ3

****