Showing posts with label ಮನುಜ ಶರೀರವಿದೇನು ಸುಖ purandara vittala. Show all posts
Showing posts with label ಮನುಜ ಶರೀರವಿದೇನು ಸುಖ purandara vittala. Show all posts

Thursday, 5 December 2019

ಮನುಜ ಶರೀರವಿದೇನು ಸುಖ purandara vittala

ಪುರಂದರದಾಸರು
ರಾಗ ಬೆಹಾಗ್. ಝಂಪೆ ತಾಳ

ಮನುಜ ಶರೀರವಿದೇನು ಸುಖ , ಇದು
ನೆನೆದರೆ ಘೋರವಿದೇನು ಸುಖ ||

ಜನನ ಮರಣ ಮಲದ ಕೂಪದಲಿದ್ದು
ಅನುಭವಿಸುವುದಿದೇನು ಸುಖ
ತನುವಿದ್ದಾಗಲೆ ಹೃದಯದ ಶೌಚದ
ಸ್ತನಗಳಂಬುವುದೇನು ಸುಖ ||

ದಿನದಿನ ಹಸಿ ತೃಷೆ ಘನ ಘನ ರೋಗದೊ=
ಳನುಭವಿಸುವುದು ಅದೇನು ಸುಖ
ನೆನೆಯಲನಿತ್ಯ ನಿರ್ಗುಳ್ಳೆಯಂತಿಪ್ಪ
ತನು ಮಲಭಾಂಡವಿದೇನು ಸುಖ ||

ಪರಿಪರಿ ವಿಧದಲಿ ಪಾಪವ ಗಳಿಸುತ್ತ
ನರಕಕೆ ಬೀಳುವುದೇನು ಸುಖ
ಪುರಂದರ ವಿಠಲನ ಮನದಿ ನೆನೆದು ಸದ್-
ಧರ್ಮದೊಳ್ ನಡೆದರೆ ಆಗ ಸುಖ ||
***

pallavi

manuja sharIravidEnu sukha idu nenedare ghOravidEnu sukha

caraNam 1

janana maraNa malada rUpadaliddu anubhavisuvudidEnu sukha
tanuviddAgale hrdayada shaucada stanagaLambuvudEnu sukha

caraNam 2

dinadina hasi trSe ghana ghana rOgadoLanu bhavisuvudu adEnu sukha
neneyala nitya nirguLLeyantirutippa tanu mala bhANDavidEnu sukha

caraNam 3

paripari vidhadali pApavagaLIsutta narakake pILuvudEnu sukha
purandara viTTalana manadi nenedu sad-dharmadoL naDedare Aga sukha
***

ಮನುಜ ಶರೀರವಿದೇನು ಸುಖ - 
ಇದನೆನೆದರೆ ಘೋರವಿದೇನು ಸುಖ ? ಪ.

ಜನನ - ಮರಣ ಮಲಕೂಪದಲ್ಲಿದ್ದುಅನುಭವಿಸುವುದು ಇದೇನು ಸುಖ ?ತನುವಿದ್ದಾಗಲೇ ಹೃದಯದ ಶೌಚದಸ್ತನಗಳನುಂಬುವುದೇನು ಸುಖ ? 1

ದಿನವು ಹಸಿವುತೃಷೆಘನ ರೋಗಂಗಳಅನುಭವಿಸುವುದು ಇದೇನು ಸುಖನೆನೆಯಲುನಿತ್ಯ ನೀರ್ಗುಳ್ಳೆಯಂತಿಪ್ಪತನುಮಲಭಾಂಡವಿದೇನು ಸುಖ ? 2

ಪರಿಪರಿ ವಿಧದಲಿ ಪಾಪವ ಗಳಿಸುತನರಕಕೆ ಬೀಳುವುದೇನು ಸುಖ ?ಪುರಂದರವಿಠಲನ ಮನದಿ ನೆನೆದು ಸದ್ಧರುಮದೊಳ್ ನಡೆದರೆ ಆಗ ಸುಖ 3
********