Showing posts with label ಕರುಣಿಸೋ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ narahari P. Show all posts
Showing posts with label ಕರುಣಿಸೋ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ narahari P. Show all posts

Thursday, 5 August 2021

ಕರುಣಿಸೋ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು

ಕರುಣಿಸೊ ಶ್ರೀ ಗುರುರಾಜ
ಬರದ್ಯಾಕೆ ಎನ್ನೊಳು ದಯ ಪ

ದಯಮಾಡೊ ಶ್ರೀ ಗುರುರಾಜ
ಹಯವದನನಿಗತಿ ಪ್ರಿಯ ಅ.ಪ
ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ
ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1
e್ಞÁನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ
ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2

ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ
ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3

ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು
ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4

ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ
ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
***