..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಲಕ್ಷ್ಮೀದೇವಿ
ದಾಸನಲ್ಲವೇ ನಿನ್ನ ದಾಸನಲ್ಲವೆ ಪ
ದಾಸನಾದ ಮೇಲೆ ಎನ್ನ ಘಾಸಿಗೊಳಿಸುವುದುಚಿತವೇನೇ ಘೋಷ ರೂಪನ ಪೆತ್ತ ತಾಯಿ ಅ.ಪ.
ಮಾಯೆಯೆ ನೀನು ಮಹಾ ಮಾಯ ಮಾಡುವರೇನು ಮಾರ ಮುಖ್ಯ ಶರತಾಪವ ಹರಿಸುತ ಮಾನದಿಂದ ಕಾಂiÉಮಾರನ ತಾಯೇ 1
ಪದ್ಮಜಾತೆ ನೀನು ಕುಬುದ್ಧಿ ಶರಧಿ ನಾನು ತಿದ್ದಿ ತೋರೆ ಹೃತ್ಪದ್ಮನಿವಾಸಿಯ ಶಿರಿಪದ್ಮನ ರಮಣಿಯೆ 2
ಕಷ್ಟ ಪಡಿಸ ಬ್ಯಾಡೆ ಭವ ಕಟ್ಟು ಬಿಡಿಸಿ ನೋಡೇ ಯೆಷ್ಟೆಂದು ಪೇಳಲಿ ಗುರುಕೃಷ್ಣನ ಪೆತ್ತ ಶಿಷ್ಟ ಶಿಖಾಮಣಿಯೆ 3
ಸಾರಶಾಸ್ತ್ರ ತೊರೆದೂ ದಿವ್ಯ ಮಾರಶಾಸ್ತ್ರ ಸುರದೂ ಶಾಸ್ತ್ರಾ ಶಾಸ್ತ್ರದ ದಾರಿಯ ತೋರಿಸಿ ಶತ್ರು ನಿವಾರಿಸು 4
ಸಾಧು ಜನರ ಕೂಡೀ ಮೋಕ್ಷಕೆ ಸಾಧನವನೆ ಮಾಡಿ ಶಿಖರಪುರಕೆ ಬಂದೆ ಶಿರಿ ತಂದೆವರದಗೋಪಾಲವಿಠಲನತೋರೆಂದೆ ಇಂದು 5
***