Showing posts with label ರಾಘವೇಂದ್ರ ಗುರುವೆ ರಾಗದ್ವೇಷಾದಿಗಳು tandepurandara vittala. Show all posts
Showing posts with label ರಾಘವೇಂದ್ರ ಗುರುವೆ ರಾಗದ್ವೇಷಾದಿಗಳು tandepurandara vittala. Show all posts

Monday, 6 September 2021

ರಾಘವೇಂದ್ರ ಗುರುವೆ ರಾಗದ್ವೇಷಾದಿಗಳು ankita tandepurandara vittala

  ankita tandepurandara vittala

ರಾಗ: ಆನಂದಭೈರವಿ ತಾಳ: ಅಟ


ರಾಘವೇಂದ್ರ ಗುರುವೆ ರಾಗದ್ವೇಷಾದಿಗಳು 

ನೀಗುವಂತೆ ಮಾಡೊ ಭಾಗವತರಪ್ರಿಯ


ನೆಲೆಯಾಗಿ ಇರುತಿಪ್ಪೆ ವರಮಂತ್ರಾಲಯದಲಿ

ನಲಿದು ಕರೆಯಲು ನಿನ್ನ ಒಲಿದು ನೀನಡೆತರುವಿ 1

ನಿನ್ನ ನಾನರಿಯೆನೊ ಮನ್ನಿಸಿ ಬಂದ ಬಗೆಗೆ

ಉನ್ನಂತಕಾರಣ ಭಿನ್ನವಿಲ್ಲದ ಕರುಣ 2

ತಪ್ಪುಗಳ ಎನ್ನ ವಿಪರೀತಗಳ ಮರೆತು

ಅಪಾರ ಕೃಪೆಯಗೊಂಡ ಸರ್ಪಶಯನನ ದಾಸ 3

ದಾಸನುನಾನೆಂದು ಏಸು ಮರ್ಮವ ತೋರಿ

ಶ್ರೀಶನಪಾದದಲಿ ಲೇಸು ಭಕುತಿಕೊಟ್ಟು 4

ಇಷ್ಟದಾಯಕ ಎನ್ನನಿಷ್ಟವತಾಳಿನೀ

ಮುಷ್ಟಿಯಮುರಿದ ಎನ್ನಿಷ್ಟದೈವವ ತೋರೊ 5

ಎಂದಿಗು ಕುಂದದ ತುಂಗಾತೀರದಲಿರ್ಪ

ಬಂದಭಕುತರಿಗೆ ಹಿಂಗದೆ ವರವೀವ 6

ಯತಿಗಳೊಳಗೆ ಶ್ರೇಷ್ಠನೆ ಯದುಪತಿ ಪ್ರಿಯನೆ

ಸ್ಮøತಿಗಳು ಆಗೋಹಾಗೆ ಮಾಡಿದ ಧೀರನೆ 7

ಪೊಡವಿಯಲಿ ತುಂಬಿತೊ ನಿನ್ನ ಪೆಸರು ಕೇಳೊ

ಎಡಬಿಡದೆ ಎನ್ನಲಿ ನಲಿಯುತಿರಬೇಕೊ 8

ಪರಪುರುಷ ತಂದೆಪುರಂದರವಿಠಲನ

ನಿರುತಪೂಜಿಪ ನಿನ್ನ ಅಡಿಗೆ ನಮಿಸುವೆ 9

***