ಕಪಿ ಎನ್ನುವರೆ ಇವಗೆ ಕುಪಿತ ಜನರುಗಳು
ಅಪರ ಭಕುತಿಯದೂತ ಮದಲಗಟ್ಟೇಶ||ಪಲ್ಲ||
ಶೂರತನದಲಿ ನೋಡೆ ಸಂಜೀವಿನಯತಂದ
ವೀರ ತನದಲಿ ನೋಡೆ ವಾರುಧಿಯ ನ್ಹಾರಿದವ
ಮಾತಿನಾ ಬಗೆ ನೋಡೆ ವ್ಯಾಕರಣ ಪಂಡಿತನು
ರೂಪದಲಿ ನೋಡಿವನು ಹೇಮಕಾಂತಿಯ ಚೆಲುವ||೧||
ಬಲದಲ್ಲಿ ನೋಡಿವನು ಬಲಭೀಮ ನೆನಿಸಿದನೆ
ಛಲದಲ್ಲಿ ನೋಡಿವನುದುಶ್ಶಾಸನನ ನೆಗಹಿ
ಸಿಟ್ಟಿನಲಿ ನೋಡಿವನ ಜಟ್ಟಿಗಳ ಕುಟ್ಟಿಹನೆ
ಹುಟ್ಟು ಹಿಡಿದರು ಸರಳ ಸೌಗಂಧಿಕವ ತಂದ||೨||
ಪಾಂಡಿತ್ಯದಲಿ ನೋಡೆ ಮಧ್ವಮತ ಉಧ್ಧರಿಸೆ
ಭಕ್ತಿಯಲಿ ನೋಡಿವನು ಕೃಷ್ಣನನು ತಂದಿಹನೆ
ಸೌಜನ್ಯದಲಿ ನೋಡೆ ಶಿಷ್ಯರನ ಮಾಡಿಹನೆ
ಮಧ್ವೇಶಕೃಷ್ಣ ನ್ನ ಮನದಲ್ಲಿ ನಿಲಿಸಿದನೆ||೩||
***
~~~ಹರೇಶ್ರೀನಿವಾಸ