BY ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವ ಶಿವಯನ್ನಿ ಮನದೊಳೂ ಹರಹರಯನ್ನಿ ಪ
ಸಾಂಬಸದಾಶಿವ ಶಂಭುವೆ ಎನ್ನಿ ಅಂಬಿಕಾರಮಣ ತೃಯಂಬಕ ನೆನ್ನಿ 1
ಗಂಗಾಧರ ಜಿತ - ನುಂಗನುಯನ್ನಿ ಮಂಗಳಮಹಿಮ ಸಿತಾಂಗನುಯನ್ನಿ2
ಅದ್ರಿನಿವಾಸ ಕಪರ್ದಿಯೆಯನ್ನಿ ರುದ್ರಗುಣದ ಸಮುದ್ರನೆಯನ್ನಿ3
ಆಗಮ ವೇದ್ಯ ವಿರಾಗಿಯೆಯನ್ನಿ ಭೋಗ ಭೂಷಣ ಮಹಾಯೋಗಿಯೆಯನ್ನಿ4
ಸುರಮುನಿಧೇಯ ಸುಚರಣನುಯನ್ನಿ ಗುರುಮಹಿಪತಿಪ್ರಭು ಕರುಣನುಯನ್ನಿ 5
***