..
kruti by ಲಕ್ಷ್ಮೀನಾರಯಣರಾಯರು Lakshminarayanaru
ದಾಸರ ದಾಸರ ದಾಸನೆಂದೆನಿಸುವ
ಲೇಸು ಭಾಗ್ಯವ ಕೊಡೊ ಶಾಶ್ವತವಾಗಿ ಪ
ಆಶಾಪಾಶವ ನಾಶನಗೈಸಿ
ದೇಶಿಗರೆಲ್ಲರ ಕೂಸೆಂದೆನಿಸಿ ಅ.ಪ.
ಕಾಮಕ್ರೋಧದ ಉಪಟಳ ಬಹಳ
ನೇಮ ನಿಷ್ಠೆಯ ಸುಳಿವೆನಗಿಲ್ಲ
ತಾಮಸನಾಗಿ ಬಳಲಿದೆನಯ್ಯ
ಪ್ರೇಮದಿ ಪಿಡಿದು ಸಲಹೊ ದಮ್ಮಯ್ಯ 1
ವದನದಿ ನಿನ್ನ ನಾಮವ ನುಡಿಸೊ
ಪದದಲಿ ನಿನ್ನ ಯಾತ್ರೆಯ ನಡೆಸೊ
ಹೃದಯದಿ ನಿನ್ನ ರೂಪವÀ ತೋರಿ
ಒದಗಿ ಪಾಲಿಸೊ ಅನುದಿನ ಶೌರಿ 2
ಭಕ್ತವತ್ಸಲ ಭಾಗ್ಯಸಂಪನ್ನ
ಭಕ್ತರ ಸಂಗತಿ ಪಾಲಿಸೊ ಘನ್ನ
ಉಕ್ತಿಯ ಲಾಲಿಸೊ ನಾನು ಅನಾಥ
ಮತ್ತೇನು ಬೇಡೆನೊ ಶಕ್ತ ಶ್ರೀಕಾಂತ 3
***