Showing posts with label ಕಾಮಹರ ಒಬ್ಬ ತಾನೆ ಬಲ್ಲಾ vijaya vittala. Show all posts
Showing posts with label ಕಾಮಹರ ಒಬ್ಬ ತಾನೆ ಬಲ್ಲಾ vijaya vittala. Show all posts

Saturday, 31 July 2021

ಕಾಮಹರ ಒಬ್ಬ ತಾನೆ ಬಲ್ಲಾ ankita vijaya vittala

 ರಾಗ - : ತಾಳ -


ಕಾಮಹರ ಒಬ್ಬ ತಾನೆ ಬಲ್ಲಾ l

ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ll ಪ ll


ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ l

ಮೈಯಲಿ ದ್ವಾದಶ ಪುಂಡ್ರ ಧರಿಸಿ l

ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ

ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ll 1 ll


ಫಣಿಯಾಭರಣವು ಪೆಡೆಯೆತ್ತಿ ಇರಲು l

ಮಣಿ ಮಣಿ ರುಂಡಮಾಲೆ ತೂಗಾಡಲು l

ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು

ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ll 2 ll


ಕಾಳಕೂಟದ ವಿಷಬಿಂದು ಮಾತುರನುಂಗೆ l

ತಾಳಲಾರದೆ ತಳಮಳವಗೊಂಡು l

ಕಾಳಿಮರ್ದನ ಕಮಲಾಯತಾಕ್ಷ ಎನ್ನ l

ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು ll 3 ll


ಗಜಮುಖ ತಾಳವ ಪಿಡಿದು ತಥೈ ಎನ್ನೆ l

ಅಜಸುತ ರಿಪು ಮದ್ದಳಿಯೆ ಮುಟ್ಟಿ l

ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ

ಜಗಾಧಿಪತಿ l ವಿಷ್ಣು ರಾಮನಲ್ಲದಿಲ್ಲವೆಂದು ll 4 ll


ಆರು ಮುಖದವ ಶಂಖವನ್ನು ಊದೆ l

ಭೈರವ ನಾಗಸ್ವರವ ನುಡಿಸೆ l

ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ l

ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು ll 5 ll


ಗೋರಾಜ ಸರಿಗಮಪದನಿಸ ಎಂದು ನಲಿಯೇ l

ಉರಗಾದಿ ಮೂಷಕಾದಿ ಚಿಗಿದಾಡಲು l

ವಾರಣದ ಗಂಗೆ ಸಿರದಲಿ ತುಳುಕಲು l

ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು ll 6 ll


ತುಂಬುರುನಾರಂದ ತಂದನ್ನತಾ ಎನ್ನೆ l

ಅಂಬರದಿಂದ ಪೂಮಳೆಗರೆಯೆ l

ಅಂಬುಜಪತಿ ಶಿರಿ ವಿಜಯವಿಟ್ಠಲ ವಿ

ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು ll 7 ll

***