ರಂಗಯ್ಯನ ನೋಡಿರೈ - ಕೌತಾಳದ ಶ್ರೀ *।
ರಂಗಯ್ಯನ ಪಾಡಿರೈ - ಬೃಂದಾವನದ ಶ್ರೀ ।। ಪಲ್ಲವಿ ।।
ಇಂಗಿತಜ್ಞರ ಸಂಗ ಪಾಲಿಸಿ । ಭಂಗ ಬಡಿಸುವ
ಭವ ಭಯಂಗಳ । ಮಂಗಳ ಕುಲ
ತಿಲಕಾಂಗನೊಳು ನಮ್ಮ । ರಂಗನಂಘ್ರಿಯ
ನೋಡಿ ನಲಿದಾ ।। ಅ ಪ ।।
ನಂಬಿ ಭಜಿಸುವರಿಷ್ಟ ಅನುಗಾಲ ಬಿಡದೆ *
ತುಂಬಿ ಕೊಡುವ ಸತ್ಯನಿಷ್ಠ ।
ಅಂಬಣ್ಣಾರ್ಯರ ಸತಿಯು ।।
ಲಕ್ಷ್ಮಾಂಬೆಯರ ಗರ್ಭದಿ ಜನಿಸಿ ಜಗದೊಳು ।
ಹಂಬಲ ಬಿಟ್ಟಿಲ್ಲ ವಿಷಯದಿ ।
ಅಂಬುಜಾಕ್ಷನ ಜಪಿಸಿ ಒಲಿಸಿದ ।। ಚರಣ ।।
ಚಿಕ್ಕ ಬಾಲಕ ತಾನಿರಲು । ಉಪನೀತ ಮಾಡೆ ।
*ಪಕ್ಕ ಊರಿಗೆ ಪೋಗುತಿರಲೂ ।
ಫಕ್ಕನೆ ಕಾಲ್ಗೆಜ್ಜೆ ಧ್ವನಿಗೈದು ।।
ಠಕ್ಕು ಶೂದ್ರನ ತೆರದಿ ಬೆನ್ಹತ್ತಿ।*
ಠಕ್ಕ ಸಾರಿಯೆ *।
ರಂಗನೊಳು ತಾನಿಕ್ಕೆ ಬೀಜಾಕ್ಷರದಿ ನಲಿದಾ ।। |||ಚರಣ ।।
ಹುಚ್ಚ ರಂಗನು ಇವನೆಂದು ತಂದಿ ತಾಯಿ ನೊಂದು ।ಮೆಚ್ಚಿ ತಿರುಮಲೆಗೆ ಬಂದು *।
ಸ್ವಚ್ಛ ಭಕುತಿಲಿ ಭಜಿಸಿ ಸೇವಿಸೆ ।।
ಅಚ್ಯುತನು ತಾನೆಂದ ರಂಗಗೆ ।
ಮೆಚ್ಚಿ ನಿನ್ನಲ್ಲಿ ನಾನಿರೆ । ಉತ್ಸವಕೆ ಮತ್ತೇಕೆ
ಬಂದ ಎಂದ ।। ಚರಣ ।।
ಚಿರುತಾ ಪಳ್ಳಿಯ ಜನರು ಪ್ರಾರ್ಥಿಸಲು
ಭಾವಿಯೊಳ್ ।ತರಿಸಿ ಕುಡಿಯುವ
ತುಂಬಾ ನೀರು ।ಸ್ಮರಿಸೆ* ಬ್ರಹ್ಮೋತ್ಸವವ ।।
ತಾಯಿಗೆ ಕರೆದು ಮಾಳಿಗೆ ಮೇಲೆ ತೋರಿಸಿ ।
ಭರದಿ ಕಾಶೀ ಯಾತ್ರೆಯೊಳು ಲಿಂಗ ।
ದೊರಕೆ ಗಂಗೆಯೊಳ್ ಮುದದೀ ತಂದಾ ।। ಚರಣ ।।
ಶ್ರೀಶೈಲ ಯಾತ್ರೆಯ ಮಾಡಿ ನವಾಬ
ಗುರು ತಂದ ।ಅಶುಚಿ ಮಾಂಸ ಫಲವ ಮಾಡಿ ।
ಅಸುರಹರ ಲಕುಮೀಶನ ಕೇಶವ ।।
ನಿಶಿಯ ಸ್ವಪ್ನದಿ ಪೇಳೆ ತನ್ನ ಮೂರ್ತಿ ।
ಅಸಮ ಬಾಳೇ ಕೊಳದಿ ತರುತಲಿ ।
ಎಸೆವ ಕೌತಾಳದಲಿ ಸ್ಥಿರವಿಟ್ಟ ।। ಚರಣ ।।
*******
ರಂಗಯ್ಯನ ನೋಡಿರೈ - ಕೌತಾಳದ ಶ್ರೀ ।
ರಂಗಯ್ಯನ ಪಾಡಿರೈ - ಬೃಂದಾವನದ ಶ್ರೀ ।। ಪಲ್ಲವಿ ।।
ಇಂಗಿತಜ್ಞರ ಸಂಗ ಪಾಲಿಸಿ । ಭಂಗ ಬಡಿಸುವ
ಭವ ಭಯಂಗಳ । ಮಂಗಳ ಕುಲ
ತಿಲಕಾಂಗನೊಳು ನಮ್ಮ । ರಂಗನಂಘ್ರಿಯ
ನೋಡಿ ನಲಿದಾ ।। ಅ ಪ ।।
ನಂಬಿ ಭಜಿಸುವರಿಷ್ಟ ಅನುಗಾಲ ಬಿಡದೆ ।
ತುಂಬಿ ಕೊಡುವ ಸತ್ಯನಿಷ್ಠ ।
ಅಂಬಣ್ಣಾರ್ಯರ ಸತಿಯು ।।
ಲಕ್ಷ್ಮಾಂಬೆಯರ ಗರ್ಭದಿ ಜನಿಸಿ ಜಗದೊಳು ।
ಹಂಬಲ ಬಿಟ್ಟಿಲ್ಲ ವಿಷಯದಿ ।
ಅಂಬುಜಾಕ್ಷನ ಜಪಿಸಿ ಒಲಿಸಿದ ।। ಚರಣ ।।
ಚಿಕ್ಕ ಬಾಲಕ ತಾನಿರಲು । ಉಪನೀತ ಮಾಡೆ ।
ಪಕ್ಕ ಊರಿಗೆ ಪೋಗುತಿರಲೂ ।
ಫಕ್ಕನೆ ಕಾಲ್ಗೆಜ್ಜೆ ಧ್ವನಿಗೈದು ।।
ಠಕ್ಕು ಶೂದ್ರನ ತೆರದಿ ಬೆನ್ಹತ್ತಿ ।ಠಕ್ಕ ಸಾರಿಯೆ ।
ರಂಗನೊಳು ತಾನಿಕ್ಕೆ ಬೀಜಾಕ್ಷರದಿ ನಲಿದಾ ।। ಚರಣ ।।
ಹುಚ್ಚ ರಂಗನು ಇವನೆಂದು ತಂದಿ ತಾಯಿ ನೊಂದು ।ಮೆಚ್ಚಿ ತಿರುಮಲೆಗೆ ಬಂದು ।
ಸ್ವಚ್ಛ ಭಕುತಿಲಿ ಭಜಿಸಿ ಸೇವಿಸೆ ।।
ಅಚ್ಯುತನು ತಾನೆಂದ ರಂಗಗೆ ।
ಮೆಚ್ಚಿ ನಿನ್ನಲ್ಲಿ ನಾನಿರೆ । ಉತ್ಸವಕೆ ಮತ್ತೇಕೆ
ಬಂದ ಎಂದ ।। ಚರಣ ।।
ಚಿರುತಾ ಪಳ್ಳಿಯ ಜನರು ಪ್ರಾರ್ಥಿಸಲು
ಭಾವಿಯೊಳ್ ।ತರಿಸಿ ಕುಡಿಯುವ
ತುಂಬಾ ನೀರು ।ಸ್ಮರಿಸೆ ಬ್ರಹ್ಮೋತ್ಸವವ ।।
ತಾಯಿಗೆ ಕರೆದು ಮಾಳಿಗೆ ಮೇಲೆ ತೋರಿಸಿ ।
ಭರದಿ ಕಾಶೀ ಯಾತ್ರೆಯೊಳು ಲಿಂಗ ।
ದೊರಕೆ ಗಂಗೆಯೊಳ್ ಮುದದೀ ತಂದಾ ।। ಚರಣ ।।
ಶ್ರೀಶೈಲ ಯಾತ್ರೆಯ ಮಾಡಿ ನವಾಬ
ಗುರು ತಂದ ।ಅಶುಚಿ ಮಾಂಸ ಫಲವ ಮಾಡಿ ।
ಅಸುರಹರ ಲಕುಮೀಶನ ಕೇಶವ ।।
ನಿಶಿಯ ಸ್ವಪ್ನದಿ ಪೇಳೆ ತನ್ನ ಮೂರ್ತಿ ।
ಅಸಮ ಬಾಳೇ ಕೊಳದಿ ತರುತಲಿ ।
ಎಸೆವ ಕೌತಾಳದಲಿ ಸ್ಥಿರವಿಟ್ಟ ।। ಚರಣ ।।
*****