Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ
ಗುಣತಾರತಮ್ಯ ಸಂಧಿ 20 ರಾಗ - ಅಭೇರಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀಧರಾ ದುರ್ಗಾ ಮನೋರಮ ವೇಧಮುಖ ಸುಮನಸ ಗಣ ಸಮಾರಾಧಿತ ಪದಾಂಬುಜ
ಜಗದಂತರ್ ಬಹಿರ್ವ್ಯಾಪ್ತ
ಗೋಧರ ಫಣಿಪ ವರಾತಪತ್ರ ನಿಷೇಧ ಶೇಷ ವಿಚಿತ್ರ ಕರ್ಮ
ಸುಬೋಧ ಸುಖಮಯ ಗಾತ್ರ ಪರಮ ಪವಿತ್ರ ಸುಚರಿತ್ರ||1||
ನಿತ್ಯ ನಿರ್ಮಲ ನಿಗಮ ವೇದಯ ಉತ್ಪತ್ತಿ ಸ್ಥಿತಿ ಲಯ ದೂರವರ್ಜಿತ
ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣ ಸೇವ್ಯ
ಸತ್ಯಕಾಮ ಸಶರಣ್ಯ ಶಾಶ್ವತ ಭೃತ್ಯವತ್ಸಲ ಭಯ ನಿವಾರಣ
ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ||2||
ಪರಮ ಪುರುಷನ ರೂಪ ಗುಣವ ಅನುಸರಿಸಿ ಕಾಂಬಳು ಪ್ರವಹದಂದದಿ
ನಿರುಪಮಳು ನಿರ್ದುಷ್ಟ ಸುಖ ಸಂಪೂರ್ಣಳು ಎನಿಸುವಳು
ಹರಿಗೆ ಧಾಮತ್ರಯಳು ಎನಿಸಿ ಆಭರಣ ವಸನ ಆಯುಧಗಳು ಆಗಿದ್ದು
ಅರಿಗಳನು ಸಂಹರಿಸುವಳು ಅಕ್ಷರಳು ಎನಿಸಿಕೊಂಡು||3||
ಈತಗಿಂತ ಅನಂತ ಗುಣದಲಿ ಶ್ರೀ ತರುಣಿ ತಾ ಕಡಿಮೆಯೆನಿಪಳು
ನಿತ್ಯಮುಕ್ತಳು ನಿರ್ವಿಕಾರಳು ತ್ರಿಗುಣ ವರ್ಜಿತಳು
ಧೌತ ಪಾಪ ವಿರಿಂಚಿ ಪವನರ ಮಾತೆಯೆನಿಪ ಮಹಾಲಕುಮಿ
ವಿಖ್ಯಾತಳು ಆಗಿಹಳು ಎಲ್ಲ ಕಾಲದಿ ಶ್ರುತಿ ಪುರಾಣದೊಳು||4||
ಕಮಲ ಸಂಭವ ಪವನರೀರ್ವರು ಸಮರು ಸಮವರ್ತಿಗಳು
ರುದ್ರಾದಿ ಅಮರಗಣ ಸೇವಿತರು ಅಪರಬ್ರಹ್ಮ ನಾಮಕರು
ಯಮಳರಿಗೆ ಮಹಾಲಕ್ಷ್ಮಿ ತಾನುತ್ತಮಳು ಕೋಟಿ ಸಜಾತಿ ಗುಣದಿಂದ
ಅಮಿತ ಸುವಿಜಾತಿ ಅಧಮರು ಎನಿಪರು ಬ್ರಹ್ಮ ವಾಯುಗಳು||5||
ಪತಿಗಳಿಂದ ಸರಸ್ವತೀ ಭಾರತಿಗಳು ಅಧಮರು ನೂರು ಗುಣ ಪರಿಮಿತ ವಿಜಾತಿ ಅವರರು
ಬಲ ಜ್ಞಾನಾದಿ ಗುಣದಿಂದ ಅತಿಶಯರು ವಾಗ್ದೇವಿ ಶ್ರೀ ಭಾರತಿಗೆ
ಪದಪ್ರಯುಕ್ತ ವಿಧಿ ಮಾರುತರವೋಳ್ ಚಿಂತಿಪುದು
ಸದ್ಭಕ್ತಿಯಲಿ ಕೋವಿದರು||6||
ಖಗಪ ಫಣಿಪತಿ ಮ್ರುಡರು ಸಮ ವಾಣಿಗೆ ಶತಗುಣ ಅವರರು ಮೂವರು
ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ
ನಗಧರನ ಷಣ್ಮ ಹಿಷಿಯರು ಪನ್ನಗ ವಿಭೂಷಣಗೈದು
ಮೇನಕಿ ಮಗಳು ವಾರುಣಿ ಸೌಪರ್ಣಿಗಳಿಗೆ ಅಧಿಕವು ಎರಡು ಗುಣ||7||
ಗರುಡ ಶೇಷ ಮಹೇಷರಿಗೆ ಸೌಪರಣಿ ವಾರುಣಿ ಪಾರ್ವತಿ ಮೂರರು ದಶಾಧಮ
ವಾರುಣಿಗೆ ಕಡಿಮೆ ಎನಿಸುವಳು ಗೌರೀ
ಹರನ ಮಡದಿಗೆ ಹತ್ತು ಗುಣದಲಿ ಸುರಪ ಕಾಮರು ಕಡಿಮೆ
ಇಂದ್ರಗೆ ಕೊರತೆಯೆನಿಸುವ ಮನ್ಮಥನು ಪದದಿಂದಲಿ ಆವಾಗ||8||
ಈರೈದು ಗುಣ ಕಡಿಮೆ ಅಹಂಕಾರಿಕ ಪ್ರಾಣನು ಮನೋಜ ನಗಾರಿಗಳಿಗೆ
ಅನಿರುದ್ಧ ರತಿ ಮನು ದಕ್ಷ ಗುರು ಶಚಿಯು ಆರು ಜನ ಸಮ
ಪ್ರಾಣನಿಂದಲಿ ಹೌರಗ ಎನಿಪರು ಹತ್ತು ಗುಣದಲಿ
ಮಾರಜಾದ್ಯರಿಗೆ ಐದು ಗುಣದಿಂದ ಅಧಮ ಪ್ರವಹಾಖ್ಯ||9||
ಗುಣದ್ವಯದಿಂ ಕಡಿಮೆ ಪ್ರವಹಗೆ ಿನ ಶಶಾಂಕಯಮ ಸ್ವಯಂಭುವ ಮನು ಮಡದಿ ಶತರೂಪ
ನಾಲ್ವರು ಪಾದ ಪಾದಾರ್ಧ ವನಧಿ ನೀಚ
ಪಾದಾರ್ಧ ನಾರದ ಮುನಿಗೆ ಭೃಗು ಅಗ್ನಿ ಪ್ರಸೂತಿಗಳು
ಎನಿಸುವರು ಪಾದಾರ್ಧ ಗುಣದಿಂದ ಅಧಮರಹುದೆಂದು||10||
ಹುತವಹಗೆ ದ್ವಿಗುಣ ಅಧಮರು ವಿಧಿಸುತ ಮರೀಚಾದಿಗಳು
ವೈವಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ ಗುಣಾಧಮನು
ವ್ರತಿವರ ಜಗನ್ಮಿತ್ರ ವರ ನಿರ್ಋತಿ ಪ್ರಾವಹಿ ತಾರರಿಗೆ
ಕಿಂಚಿತ್ ಗುಣ ಅಧಮ ಧನಪ ವಿಶ್ವಕ್ಸೇನರು ಎನಿಸುವರು||11||
ಧನಪ ವಿಶ್ವಕ್ಸೇನ ಗೌರೀ ತನಯರಿಗೆ ಉಕ್ತ ಇತರರು ಸಮರೆನಿಸುವರು
ಎಂಭತ್ತೈದು ಜನ ಶೇಷ ಶತರೆಂದು
ದಿನಪರಾರು ಏಳಧಿಕ ನಾಲ್ವತ್ತನಿಲರು ಏಳು ವಸು
ರುದ್ರರೀರೈದು ಅನಿತು ವಿಶ್ವೇ ದೇವ ಋಭು ಅಶ್ವಿನೀ ಪಿತೃ ಧರಣೀ||12||
ಇವರಿಗಿಂತಲಿ ಕೊರತೆಯೆನಿಪರು ಚ್ಯವನ ಸನಕಾದಿಗಳು
ಪಾವಕ ಕವಿ ಉಚಿಥ್ಥ್ಯ ಜಯಂತ ಕಶ್ಯಪ ಮನುಗಳು ಎಕದಶ
ಧ್ರುವ ನಹುಷ ಶಶಿಬಿಂದು ಹೈಹಯ ದೌಷ್ಯಂತಿ ವಿರೋಚನನ ನಿಜ ಕುವರ
ಬಲಿ ಮೊದಲಾದ ಸಪ್ತ ಇಂದ್ರರು ಕಕುತ್ಸ್ಥ ಗಯ||13||
ಪೃಥು ಭರತ ಮಾಂಧಾತ ಪ್ರಿಯವ್ರತ ಮರುತ ಪ್ರಹ್ಲಾದ ಸುಪರೀಕ್ಷಿತ
ಹರಿಶ್ಚಂದ್ರ ಅಂಬರೀಷ ಉತ್ತನಪಾದ ಮುಖ
ಶತ ಸುಪುಣ್ಯ ಶ್ಲೋಕರು ಗದಾ ಭ್ರುತಗೆ ಅಧಿಷ್ಠಾನರು
ಸುಪ್ರಿಯವ್ರತಗೆ ದ್ವಿಗುಣ ಅಧಮರು ಕರ್ಮಜರು ಎಂದು ಕರೆಸುವರು||14||
ನಳಿನಿ ಸಂಜ್ಞಾ ರೋಹಿಣೀ ಶ್ಯಾಮಲ ವಿರಾಟ್ ಪರ್ಜನ್ಯರು ಅಧಮರು
ಯಲರು ಮಿತ್ರನ ಮಡದಿ ದ್ವಿಗುಣ ಅಧಮಳು ಬಾಂಬೊಳಗೆ
ಜಲ ಮಯ ಬುಧ ಅಧಮನು ದ್ವಿಗುಣದಿ ಕೆಳಗೆನಿಸುವಳು ಉಷಾ
ಶನೈಶ್ಚರಳಿಗೆ ಈರು ಗುಣಾಧಮರು ಉಷಾ ದೇವಿ ದ್ಯಸಿಯಿಂದಾ||15||
ಎರಡು ಗುಣ ಕರ್ಮಾಧಿಪತಿ ಪುಷ್ಕರ ಕಡಿಮೆ
ಆಜಾನು ದಿವಿಜರು ಚಿರ ಪಿತೃಗಳಿಂದ ಉತ್ತಮರು ಕಿಂಕರರು ಪುಷ್ಕರಗೆ
ಸುರಪನಾಲಯ ಗಾಯಕ ಉತ್ತಮ ಎರಡೈದು ಗುಣದಿಂದಾಧಮ
ತುಂಬುರಗೆ ಸಮ ನೂರುಕೋಟಿ ಋಷಿಗಳು ನೂರುಜನರುಳಿದು||16||
ಅವರವರ ಪತ್ನಿಯರು ಅಪ್ಸರ ಯುವತಿಯರು ಸಮ
ಉತ್ತಮರನುಳಿದು ಅವರರೆನಿಪರು ಮನುಜ ಗಂಧರ್ವರು ದ್ವಿಷಡ್ಗುಣದಿ
ಕುವಲಯಾಧಿಪರು ಈರು ಐದು ಗುಣ ಅವನಿಪ ಸ್ತ್ರೀಯರು
ದಶೋತ್ತರ ನವತಿ ಗುಣದಿಂದ ಅಧಮರು ಎನಿಪರು ಮಾನುಷೋತ್ತಮರು||17||
ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರು
ರಜಸ್ಸತ್ವ ಅಧಿಕಾರಿಗಳು ಭಗವದ್ಭಕ್ತರು ಎನಿಸುವರು
ನಿತ್ಯ ಬದ್ಧರು ರಜೋರಜರು ಉತ್ಪತ್ತಿ ಭೂಸ್ವರ್ಗದೊಳು
ನರಕದಿ ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು||18||
ತಮಸ್ಸಾತ್ವಿಕರು ಎನಿಸಿಕೊಂಬರು ಅಮಿತನ ಆಖ್ಯಾತ ಅಸುರರ ಗಣ
ತಮೋ ರಾಜಸರು ಎನಿಸಿಕೊಂಬರು ದೈತ್ಯ ಸಮುದಾಯ
ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣ ಪೂರ್ಣ
ಸರ್ವಾಧಮರೊಳು ಅಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ||19||
ಇವನ ಪೋಲುವ ಪಾಪಿ ಜೀವರು ಭುವನ ಮೂವರೊಳಿಲ್ಲ ನೋಡಲು
ನವ ವಿಧ ದ್ವೇಷಗಳಿಗೆ ಆಕಾರನು ಎನಿಸಿಕೊಳುತಿಪ್ಪ
ಬವರದೊಳು ಬಂಗಾರದೊಳು ನಟ ಯುವತಿ ದ್ಯೂತಾ ಪೇಯ ಮೃಷದೊಳು
ಕವಿಸಿ ಮೋಹದಿ ಕೆಡಿಸುವನುಯೆಂದರಿದು ತ್ಯಜಿಸುವದು||20||
ತ್ರಿವಿಧ ಜೀವ ಪ್ರತತಿಗಳ ಸಗ್ಗ ಆವೊಳೆಯಾಣ್ಮ ಆಲಯನು ನಿರ್ಮಿಸಿ
ಯುವತಿಯರೊಡಗೂಡಿ ಕ್ರೀಡಿಸುವನು ಕೃಪಾಸಾಂದ್ರ
ದಿವಿಜ ದಾನವ ತಾರತಮ್ಯದ ವಿವರ ತಿಳಿವ ಮಹಾತ್ಮರಿಗೆ
ಬಾನ್ನವಿರ ಸಖ ತಾನೊಲಿದು ಉದ್ಧರಿಸುವನು ದಯದಿಂದ||21||
ದೇವ ದೈತ್ಯರ ತಾರತಮ್ಯವು ಪಾವಮಾನಿ ಮತಾನುಗರಿಗೆ ಇದು ಕೇವಲ ಅವಶ್ಯಕವು
ತಿಳಿವುದು ಸರ್ವ ಕಾಲದಲಿ
ದಾವಶಿಖಿ ಪಾಪಾಟವಿಗೆ ನವ ನಾವೆಯೆನಿಪುದು ಭವ ಸಮುದ್ರಕೆ
ಪಾವಟಿಗೆ ವೈಕುಂಠ ಲೋಕಕೆ ಇದೆಂದು ಕರೆಸುವುದು||22||
ತಾರತಮ್ಯ ಜ್ಞಾನ ಮುಕ್ತಿ ದ್ವಾರವು ಎನಿಪುದು ಭಕ್ತ ಜನರಿಗೆ ತೋರಿ ಪೇಳಿ
ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು
ಕ್ರೂರ ಮಾನವರಿಗಿದು ಕರ್ಣ ಕಟೋರವು ಎನಿಪುದು
ನಿತ್ಯದಲಿ ಅಧಿಕಾರಿಗಳಿಗಿದನ ಅರುಪುವುದು ದುಸ್ತರ್ಕಿಗಳ ಬಿಟ್ಟು||23||
ಹರಿಸಿರಿವಿರಿಂಚಿ ಈರಭಾರತಿ ಗರುಡ ಫಣಿ ಪತಿ ಷಣ್ಮಹಿಷಿಯರು
ಗಿರಿಜನಾಕ ಈಶ ಸ್ಮರ ಪ್ರಾಣ ಅನಿರುದ್ಧ ಶಚೀದೇವೀ
ಗುರು ರತೀ ಮನು ದಕ್ಷ ಪ್ರವಹಾ ಮರುತ ಮಾನವಿ ಯಮ ಶಶಿ ದಿವಾಕರ
ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ||24||
ವ್ರತತಿಜಾಸನ ಪುತ್ರರೆನಿಸುವ ವ್ರತಿವರ ಮರೀಚಿ ಅತ್ರಿ
ವೈವಸ್ವತನು ತಾರಾ ಮಿತ್ರ ನಿರ್ಋತಿ ಪ್ರವಹ ಮಾರುತನ ಸತಿ
ಧನ ಈಶ ಅಶ್ವಿನಿಗಳ ಈರ್ಗಣಪತಿಯು ವಿಶ್ವಕ್ಸೇನ ಶೇಷನು ಶತರು
ಮನುಗಳು ಉಚಿಥ್ಯ ಛಾವಣ ಮುನಿಗಳಿಗೆ ನಮಿಪೆ||25||
ಶತ ಸುಪುಣ್ಯ ಶ್ಲೋಕರು ಎನಿಸುವ ಕ್ಷಿತಿಪರಿಗೆ ನಮಿಸುವೆನು
ಬಾಗೀರಥಿ ವಿರಾಟ್ ಪರ್ಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾಹುತ ವಹನ ಮಹಿಳಾ
ಬುಧ ಉಷಾ ಕ್ಷಿತಿ ಶನೈಶ್ಚರ ಪುಷ್ಕರರಿಗೆ
ಆನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು||26||
ನೂರಧಿಕವು ಆಗಿಪ್ಪ ಮತ್ತೆ ಹದಿನಾರು ಸಾವಿರ ನಂದ ಗೋಪ ಕುಮಾರನ
ಅರ್ಧಾಂಗಿಯರು ಅಗಸ್ತ್ಯ ಆದೇ ಮುನೀಶ್ವರರು
ಊರ್ವಶೀ ಮೊದಲಾದ ಅಪ್ಸರ ನಾರಿಯರು ಶತ ತುಂಬುರರು
ಕಂಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ||27||
ಪಾವನರು ಶುಚಿ ಶುದ್ಧ ನಾಮಕ ದೇವತೆಗಳು ಆಜಾನ ಚಿರ ಪಿತೃ
ದೇವ ನರ ಗಂಧರ್ವರು ಅವನಿಪ ಮಾನುಷೋತ್ತಮರು
ಈ ವಸುಮತಿಯೊಳು ಉಳ್ಳ ವೈಷ್ಣವರ ಅವಳಿಯೊಳು ಇಹನೆಂದು
ನಿತ್ಯಡಿ ಸೇವಿಪುದು ಸಂತೋಷದಿಂ ಸರ್ವ ಪ್ರಕಾರದಲಿ||28||
ಮಾನುಷೋತ್ತಮರನ ವಿಡಿದು ಚತುರಾನನ ಅಂತ ಶತ ಉತ್ತಮತ್ವ
ಕ್ರಮೇಣ ಚಿಂತಿಪ ಭಕ್ತರಿಗೆ ಚತುರ ವಿಧ ಪುರುಷಾರ್ಥ
ಶ್ರೀನಿಧಿ ಜಗನ್ನಾಥ ವಿಠಲ ತಾನೇ ಒಲಿದು ಈವನು
ನಿರಂತರ ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ||29||
**********
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
SrIdharA durgA manOrama vEdhamuKa sumanasa gaNa samArAdhita padAMbuja
jagadaMtar bahirvyApta
gOdhara PaNipa varAtapatra niShEdha SESha vicitra karma
subOdha suKamaya gAtra parama pavitra sucaritra||1||
nitya nirmala nigama vEdaya utpatti sthiti laya dUravarjita
stutya pUjya prasiddha muktAmukta gaNa sEvya
satyakAma saSaraNya SASvata BRutyavatsala Baya nivAraNa
atyadhika saMpriyatama jagannAtha mAM pAhi||2||
parama puruShana rUpa guNava anusarisi kAMbaLu pravahadandadi
nirupamaLu nirduShTa suKa saMpUrNaLu enisuvaLu
harige dhAmatrayaLu enisi ABaraNa vasana AyudhagaLu Agiddu
arigaLanu saMharisuvaLu akSharaLu enisikoMDu||3||
Itaginta ananta guNadali SrI taruNi tA kaDimeyenipaLu
nityamuktaLu nirvikAraLu triguNa varjitaLu
dhauta pApa virinci pavanara mAteyenipa mahAlakumi
viKyAtaLu AgihaLu ella kAladi Sruti purANadoLu||4||
kamala saMBava pavanarIrvaru samaru samavartigaLu
rudrAdi amaragaNa sEvitaru aparabrahma nAmakaru
yamaLarige mahAlakShmi tAnuttamaLu kOTi sajAti guNadiMda
amita suvijAti adhamaru eniparu brahma vAyugaLu||5||
patigaLinda sarasvatI BAratigaLu adhamaru nUru guNa parimita vijAti avararu
bala j~jAnAdi guNadinda atiSayaru vAgdEvi SrI BAratige
padaprayukta vidhi mArutaravOL ciMtipudu
sadBaktiyali kOvidaru||6||
Kagapa PaNipati mruDaru sama vANige SataguNa avararu mUvaru
migilenisuvanu SESha padadindali triyaMbakage
nagadharana ShaNma hiShiyaru pannaga viBUShaNagaidu
mEnaki magaLu vAruNi sauparNigaLige adhikavu eraDu guNa||7||
garuDa SESha mahESharige sauparaNi vAruNi pArvati mUraru daSAdhama
vAruNige kaDime enisuvaLu gaurI
harana maDadige hattu guNadali surapa kAmaru kaDime
indrage korateyenisuva manmathanu padadiMdali AvAga||8||
Iraidu guNa kaDime ahankArika prANanu manOja nagArigaLige
aniruddha rati manu dakSha guru Saciyu Aru jana sama
prANanindali hauraga eniparu hattu guNadali
mArajAdyarige aidu guNadinda adhama pravahAKya||9||
guNadvayadiM kaDime pravahage SaSAMkayama svayaMBuva manu maDadi SatarUpa
nAlvaru pAda pAdArdha vanadhi nIca
pAdArdha nArada munige BRugu agni prasUtigaLu
enisuvaru pAdArdha guNadinda adhamarahudendu||10||
hutavahage dviguNa adhamaru vidhisuta marIcAdigaLu
vaivasvatanu viSvAmitrarige kiMcid guNAdhamanu
vrativara jaganmitra vara nir^^Ruti prAvahi tArarige
kiMcit guNa adhama dhanapa viSvaksEnaru enisuvaru||11||
dhanapa viSvaksEna gaurI tanayarige ukta itararu samarenisuvaru
eMBattaidu jana SESha Satarendu
dinaparAru ELadhika nAlvattanilaru ELu vasu
rudrarIraidu anitu viSvE dEva RuBu aSvinI pitRu dharaNI||12||
ivarigintali korateyeniparu cyavana sanakAdigaLu
pAvaka kavi uciththya jayanta kaSyapa manugaLu ekadaSa
dhruva nahuSha SaSibindu haihaya dauShyaMti virOcanana nija kuvara
bali modalAda sapta indraru kakutstha gaya||13||
pRuthu Barata mAndhAta priyavrata maruta prahlAda suparIkShita
hariScandra aMbarISha uttanapAda muKa
Sata supuNya SlOkaru gadA Brutage adhiShThAnaru
supriyavratage dviguNa adhamaru karmajaru eMdu karesuvaru||14||
naLini sanj~jA rOhiNI SyAmala virAT parjanyaru adhamaru
yalaru mitrana maDadi dviguNa adhamaLu bAMboLage
jala maya budha adhamanu dviguNadi keLagenisuvaLu uShA
SanaiScaraLige Iru guNAdhamaru uShA dEvi dyasiyiMdA||15||
eraDu guNa karmAdhipati puShkara kaDime
AjAnu divijaru cira pitRugaLinda uttamaru kiMkararu puShkarage
surapanAlaya gAyaka uttama eraDaidu guNadindAdhama
tuMburage sama nUrukOTi RuShigaLu nUrujanaruLidu||16||
avaravara patniyaru apsara yuvatiyaru sama
uttamaranuLidu avarareniparu manuja gaMdharvaru dviShaDguNadi
kuvalayAdhiparu Iru aidu guNa avanipa strIyaru
daSOttara navati guNadinda adhamaru eniparu mAnuShOttamaru||17||
satvasatvaru satvarAjasa satvatAmasa mUvaru
rajassatva adhikArigaLu BagavadBaktaru enisuvaru
nitya baddharu rajOrajaru utpatti BUsvargadoLu
narakadi pRuthviyoLu sancarisutipparu rajastAmasaru||18||
tamassAtvikaru enisikoMbaru amitana AKyAta asurara gaNa
tamO rAjasaru enisikoMbaru daitya samudAya
tamastAmasa kali purandhriyu amita durguNa pUrNa
sarvAdhamaroLu adhamAdhama durAtmanu kaliyenisikoMba||19||
ivana pOluva pApi jIvaru Buvana mUvaroLilla nODalu
nava vidha dvEShagaLige AkAranu enisikoLutippa
bavaradoLu bangAradoLu naTa yuvati dyUtA pEya mRuShadoLu
kavisi mOhadi keDisuvanuyendaridu tyajisuvadu||20||
trividha jIva pratatigaLa sagga AvoLeyANma Alayanu nirmisi
yuvatiyaroDagUDi krIDisuvanu kRupAsAndra
divija dAnava tAratamyada vivara tiLiva mahAtmarige
bAnnavira saKa tAnolidu uddharisuvanu dayadinda||21||
dEva daityara tAratamyavu pAvamAni matAnugarige idu kEvala avaSyakavu
tiLivudu sarva kAladali
dAvaSiKi pApATavige nava nAveyenipudu Bava samudrake
pAvaTige vaikunTha lOkake idendu karesuvudu||22||
tAratamya j~jAna mukti dvAravu enipudu Bakta janarige tOri pELi
suKAbdhiyoLu lOlyADuvudu budharu
krUra mAnavarigidu karNa kaTOravu enipudu
nityadali adhikArigaLigidana arupuvudu dustarkigaLa biTTu||23||
harisirivirinci IraBArati garuDa PaNi pati ShaNmahiShiyaru
girijanAka ISa smara prANa aniruddha SacIdEvI
guru ratI manu dakSha pravahA maruta mAnavi yama SaSi divAkara
varuNa nArada surAsya prasUti BRugu munipa||24||
vratatijAsana putrarenisuva vrativara marIci atri
vaivasvatanu tArA mitra nir^^Ruti pravaha mArutana sati
dhana ISa aSvinigaLa IrgaNapatiyu viSvaksEna SEShanu Sataru
manugaLu ucithya CAvaNa munigaLige namipe||25||
Sata supuNya SlOkaru enisuva kShitiparige namisuvenu
bAgIrathi virAT parjanya rOhiNi SyAmalA sanj~jAhuta vahana mahiLA
budha uShA kShiti SanaiScara puShkararige
Anatisi binnayisuvenu Bakti j~jAna koDalendu||26||
nUradhikavu Agippa matte hadinAru sAvira nanda gOpa kumArana
ardhAngiyaru agastya AdE munISvararu
UrvaSI modalAda apsara nAriyaru Sata tuMburaru
kaMsAri guNagaLa kIrtaneya mADisali enninda||27||
pAvanaru Suci Suddha nAmaka dEvategaLu AjAna cira pitRu
dEva nara gandharvaru avanipa mAnuShOttamaru
I vasumatiyoLu uLLa vaiShNavara avaLiyoLu ihanendu
nityaDi sEvipudu santOShadiM sarva prakAradali||28||
mAnuShOttamarana viDidu caturAnana anta Sata uttamatva
kramENa cintipa Baktarige catura vidha puruShArtha
SrInidhi jagannAtha viThala tAnE olidu Ivanu
nirantara sAnurAgadi paThisuvudu santarida mareyadale||29|
*********