ನೀ ತಂದೆ ನಾ ಬಂದೆ
ನೀ ಎನ್ನ ತಂದೆ ||ಪ||
ನೀ ಎನ್ನ ತಂದೆ ||ಪ||
ಮನ್ಮನದಾಧೀನ ಪೇಳೆನ್ನ ತಂದೆ ||ಅ||
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ನೀ ತಂದೆ ||
ಕಾಮದಲಿ ಎನ ತಂದೆ ಕ್ರೋಧದಲಿ ಎನ ತಂದೆ
ಉನ್ಮದಾಭರಣಗಳಲೆನ್ನ ತಂದೆ ||
ಹಿಂದೆ ಬರೆದಾ ಬರೆಹ ಹೇಗಾದರಾಗಲಿ
ಮುಂದೆ ಚಂದಾಗಿ ಬರೆಯಯ್ಯ ಪುರಂದರ ವಿಠಲ ||
****
ರಾಗ ಕಮಾಚ್ ಛಾಪು ತಾಳ (raga, taala may differ in audio)
pallavi
nI tande nA bande nI enna tande
anupallavi
manmanadAdhIna pELenna tande
caraNam 1
ondalla eraDalla mUralla nAlgalla embhatta nAlgu lakSa yOnigaLalli nI tande
caraNam 2
kAmadali ena tande krOdhadali ena tande unmadAbharaNagaLenna tande
caraNam 3
hinde baredo bareha hOgAdharAgali munde candAgi bareyayya purandara viTTala
***