ರಾಗ: ಮಾಂಡ್ ತಾಳ: ಆದಿ
ತುಂಗಾತೀರದಿ ರಾಜಿಪ ಯತಿಯ
ನೀರೆ ನೋಡೋಣ ಬಾ ಪ
ವೃಂದಾವನದೊಳಗಿರುವ
ವೃಂದಾರಕರನುಪೊರೆವ
ವೃಂದಗುಣಗಳಿಂಮೆರೆವ
ವೃಂದಾರಕತರುಎನಿಸಿದ ಸುಜನಕೆ 1
ಮರುತಮತಾಂಬುಧಿಚಂದ್ರ ದಿನ-
ಕರ ಅಘತಮಕೆ ರವೀಂದ್ರ
ದುರುಳಮತಾಹಿಖಗೇಂದ್ರ
ಗುರು ಕರುಣಾಕರ ಶ್ರೀರಾಘವೇಂದ್ರ 2
ರವಿಶಶಿಕುಜಬುಧಗುರುವೆ
ಕವಿರಾಹುಧ್ವಜಬಲವೆ
ಇವರ ದರುಶನಕೆ ಫಲವೆ ಅಭಿ-
ನವಜನಾರ್ದನವಿಠಲನ ದಯವೆ 3
***