Showing posts with label ಶ್ರೀವೇದನಾಯಕೀ ಆಶ್ರಿತಜನ ಪಾಲಕೀ venkatakrishna. Show all posts
Showing posts with label ಶ್ರೀವೇದನಾಯಕೀ ಆಶ್ರಿತಜನ ಪಾಲಕೀ venkatakrishna. Show all posts

Tuesday, 1 June 2021

ಶ್ರೀವೇದನಾಯಕೀ ಆಶ್ರಿತಜನ ಪಾಲಕೀ ankita venkatakrishna

by yadugiriyamma  

 ಲಕ್ಷ್ಮೀ ಸ್ತುತಿ

ಶ್ರೀವೇದನಾಯಕೀ ಆಶ್ರಿತಜನ ಪಾಲಕೀ

ಶ್ರೀವೇದನಾಯಕೀ ಜಯ ಜಯಾ ಪ

ನೀನೇ ರಂಗನರಾಣೀ ನೀನೇ ಪಂಕಜಪಾಣೀ

ನೀನೇ ಪನ್ನಗವೇಣೀ ನೀನೇ ಮಧುರವಾಣೀ 1

ನೀನೇ ಕಮಲವಾಸೇ ನೀನೇ ಸಜ್ಜನಪೋಷೇ

ನೀನೇ ಭವಭಯನಾಶೇ ನೀನೇ ಹರಿಸಂತೋಷೆ 2

ನೀನೇ ಲೋಕಮಾತೆ ನೀನೇ ಜಗತ್ಪ್ರಖ್ಯಾತೇ

ನೀನೇ ಕಾಮಿತದಾತೇ ನೀನೇ ರಂಗಗೆ ಸೋತೆ 3

****