ಪುಟ್ಟ ಬಾಲನೆ ಮನೆ ಕಟ್ಟೀಲಾಡೋ
ಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ
ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆ
ಉಣ್ಣೀಸುತಲೆ ಬೆಕ್ಕಿಗುಂಡನಮ್ಮ
ಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿ
ಓಡುತಲಿಹರಮ್ಮಾ ನೋಡೆಂಬರೋ 1
ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆ
ಇಂದು ಹುಟ್ಟಿದ ದಿನಾ ಎರಕೋ ಕೂಸ
ಮಂದಿರದೊಳು ವಿಪ್ರವೃಂದವ ಪೂಜಿಸಿ
ಛಂದಛಂದದ ವಸ್ತ ತಂದಿಡುವೆ 2
ಮಂದಿ ಮಕ್ಕಳು ನೋಡು ಛಂದದಿ ತಮ್ಮನೆ
ಮುಂದಲೆ ಊರೊಳಗಾಡೆಂಬರೊ
ನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋ
ಇಂದೆಲ್ಲಿ ಪೋಗದಿರಿಂದಿರೇಶಾ 3
****