Showing posts with label ಬರುವುದು ನೋಡೆ ಶ್ರೀಹರಿ ರಥವೇರಿ prananatha vittala. Show all posts
Showing posts with label ಬರುವುದು ನೋಡೆ ಶ್ರೀಹರಿ ರಥವೇರಿ prananatha vittala. Show all posts

Thursday, 5 August 2021

ಬರುವುದು ನೋಡೆ ಶ್ರೀಹರಿ ರಥವೇರಿ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು

ಬರುವುದು ನೋಡೆ ಶ್ರೀಹರಿ ರಥವೇರಿ ಪ

ಎಡಬಲದಲಿ ಹರಿ ಉಡುರಾಜ ಮುಖಿಯರ

ಸಡಗರದಿಂದಲಿ ಬಡವರಾಧಾರಿ ಶೌರಿ 1

ಗುಣಮಣಿ ಶ್ರೀನಿವಾಸ ಮಣಿಯುವೋ ಭಕ್ತರ

ದಣಿವು ಆರಿಪುದಕೆ ವಿನಯ ಪೂರ್ವಕವಾಗಿ2

ಬಗೆ ಬಗೆಯಲಿ ತನ್ನ ಭಜಿಸುವೊ ಭಕ್ತರ

ಸುಗುಣ ಶ್ರೀ ಪ್ರಾಣನಾಥ ವಿಠಲ ರಾಯನು ನಗುತ 3

***