Showing posts with label ಗುರುರಾಘವೇಂದ್ರರ ಚರಣಕಮಲಕೆ sirigangakanaka. Show all posts
Showing posts with label ಗುರುರಾಘವೇಂದ್ರರ ಚರಣಕಮಲಕೆ sirigangakanaka. Show all posts

Monday 6 September 2021

ಗುರುರಾಘವೇಂದ್ರರ ಚರಣಕಮಲಕೆ ankita sirigangakanaka

 ankita ಸಿರಿಗಂಗಾಕನಕ 

ರಾಗ: [ಸಿಂಹೇಂದ್ರಮಧ್ಯಮ]  ತಾಳ: [ಆದಿ]


ಗುರು ರಾಘವೇಂದ್ರರ ಚರಣಕಮಲಕೆ

ಎರಗು ಭಕ್ತಿಯಿಂದ ಮುಕ್ತಿಪಥದೊರಕುವುದು


ಸರಸದಿ ಸರಿಗಮ ನುಡಿವ ಸರಸಿಗಳು

ಪರಮಪುರುಷ ಹರಿಯ ಪರಮಸೇವಕರಿವರು ಅ.ಪ


ಸದಮಲರು ಸದಗುಣರು ಸಾರಸರ್ವಸ್ವ

ಮುದಮನವ ಕರುಣಿಪರು ತಿಳಿ ರಹಸ್ಯ

ವಿಧವಿಧದಿ ಭಜಿಸಿ ಭಕುತಿದೋರೆ

ಒದಗುವರು ನಿನ್ನ ಸಂಕಷ್ಟಕೆ 1

ವಿಪರೀತಮಹಿಮರು ತಪಶಾಂತಿಗೊಲಿವರು

ಕುಪಿತರಾಗದ ಗುಪಿತರಿವರು ಗಹನರು

ಅಪರಾಧಿ ನೀನೆಂದು ಹಪಹಪಿಸಬೇಡ

ಉಪಶಾಂತಿ ಇವರಿಂದ ಖರೆ ನೀ ತಿಳಿ 2

ತುಂಗಾತಟವಿಹಾರಿಗಳು ಹರಿಯಂತರಂಗವ್ಯಾಪ್ತರು

ಬಂಗಾರದಂಥ ಮಂತ್ರಾಲಯದಿ ನೆಲೆಸಿಹರು

ಶೃಂಗಾರಮೂರುತಿ ಸಿರಿಗಂಗಾಜನಕನ ಅಂತ-

ರಂಗಭಕ್ತರು ಜೀವನ್ಮುಕ್ತರಿವರು 3

***