ankita ಸಿರಿಗಂಗಾಕನಕ
ರಾಗ: [ಸಿಂಹೇಂದ್ರಮಧ್ಯಮ] ತಾಳ: [ಆದಿ]
ಗುರು ರಾಘವೇಂದ್ರರ ಚರಣಕಮಲಕೆ
ಎರಗು ಭಕ್ತಿಯಿಂದ ಮುಕ್ತಿಪಥದೊರಕುವುದು ಪ
ಸರಸದಿ ಸರಿಗಮ ನುಡಿವ ಸರಸಿಗಳು
ಪರಮಪುರುಷ ಹರಿಯ ಪರಮಸೇವಕರಿವರು ಅ.ಪ
ಸದಮಲರು ಸದಗುಣರು ಸಾರಸರ್ವಸ್ವ
ಮುದಮನವ ಕರುಣಿಪರು ತಿಳಿ ರಹಸ್ಯ
ವಿಧವಿಧದಿ ಭಜಿಸಿ ಭಕುತಿದೋರೆ
ಒದಗುವರು ನಿನ್ನ ಸಂಕಷ್ಟಕೆ 1
ವಿಪರೀತಮಹಿಮರು ತಪಶಾಂತಿಗೊಲಿವರು
ಕುಪಿತರಾಗದ ಗುಪಿತರಿವರು ಗಹನರು
ಅಪರಾಧಿ ನೀನೆಂದು ಹಪಹಪಿಸಬೇಡ
ಉಪಶಾಂತಿ ಇವರಿಂದ ಖರೆ ನೀ ತಿಳಿ 2
ತುಂಗಾತಟವಿಹಾರಿಗಳು ಹರಿಯಂತರಂಗವ್ಯಾಪ್ತರು
ಬಂಗಾರದಂಥ ಮಂತ್ರಾಲಯದಿ ನೆಲೆಸಿಹರು
ಶೃಂಗಾರಮೂರುತಿ ಸಿರಿಗಂಗಾಜನಕನ ಅಂತ-
ರಂಗಭಕ್ತರು ಜೀವನ್ಮುಕ್ತರಿವರು 3
***
No comments:
Post a Comment