RSS song .
ಕೇಶವನಾ ಬಲಿದಾನ
ಹಿಂದು ಸಮಾಜದ ಪುನರುತ್ಥಾನಕೆ ||ಪ||
ಹಿಂದು ಹಿಂದುವಿನ ಹೃದಯದಲಿ
ರಾಷ್ಟ್ರಪ್ರೇಮ ರಸವೆರೆಯುತಲೀ
ಬಂಧು ಭಾವದ ನಿಜವನು ತೋರಿ
ಹಿಂದು ಭಿನ್ನತೆಯ ದಮನವ ಗೈದಾ
ಸಂಘಟನ ಸೂತ್ರಧಾರೀ ||೧||
ಆರ ಅಕ್ಕರೆಯ ಬಾವುಟವೂ
ಹಿಂದು ಹೃದಯದಲಿ ಮೆರೆಯುವುದೋ
ಆರ ಶಬ್ದಕೇ ಯುವಕರ ಮನವೂ
ಏಕ ಕಂಠದಿಂ ಓಗೊಡುತಿಹುದೋ
ಹಿಂದು ಕಾಂತಿಗೆ ಮಣಿದರ್ಪಣವೋ ||೨||
ಈಶ್ವರೀಯತೆಯ ಬೆಳೆಯಿಸಲೂ
ರುಧಿರ ಜಲವ ತಾನೆರೆದಿಹನೂ
ಅಡಿಗಡಿಗೂ ತಾ ವಿಷವ ಸ್ವಾಗತಿಸಿ
ಪ್ರೇಮ ಶರಧಿಯಿಂ ಅಮೃತವನೆಸಗೀ
ಹಿಂದು ಸಂಸ್ಕೃತಿಗೆ ಅಮರತೆ ನೀಡಿದಾ ||೩||
ವಿಶ್ವ ಗುರುವಿನವತಾರವದೂ
ಹಿಂದು ಮಾತೆಗೆ ಬಲು ಚೆಲುವೂ
ಮಂಗಲ ಮಾತೆಯ ಮರುಗಿದ ಮನಕೇ
ಸುಮಧುರ ಶಾಂತಿಯ ಬಯಸಿದ ಮನವಾ
ರಾಷ್ಟ್ರದೇವನಲಿ ಸಮರಸವಾಂತಾ ||೪||
***
kESavanA balidAna
hiMdu samAjada punarutthAnake ||pa||
hiMdu hiMduvina hRudayadali
rAShTraprEma rasavereyutalI
baMdhu BAvada nijavanu tOri
hiMdu Binnateya damanava gaidA
saMGaTana sUtradhArI ||1||
Ara akkareya bAvuTavU
hiMdu hRudayadali mereyuvudO
Ara SabdakE yuvakara manavU
Eka kaMThadiM OgoDutihudO
hiMdu kAMtige maNidarpaNavO ||2||
ISvarIyateya beLeyisalU
rudhira jalava tAneredihanU
aDigaDigU tA viShava svAgatisi
prEma SaradhiyiM amRutavanesagI
hiMdu saMskRutige amarate nIDidA ||3||
viSva guruvinavatAravadU
hiMdu mAtege balu celuvU
maMgala mAteya marugida manakE
sumadhura SAMtiya bayasida manavA
rAShTradEvanali samarasavAMtA ||4||
***