ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ
ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ
ಎಲ್ಲಿ ನೋಡಿದರಲ್ಲಿ ಇರುವಾತಾ
ಎಲ್ಲರನು ಪೊರೆವಾತಾ
ಬಲ್ಲಿದನು ಬಲಿಯ ತುಳದಾತಾ
ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ
ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1
ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ
ಉಬ್ಬಸವ ಬಡುವಾಗ ಸಲಹಿದವರ್ಯಾರೋ
ಅಬ್ಬರದ ನೋವಿನೊಳು ಒಬ್ಬನೇ ಬರುವಾಗ
ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2
ವರದ ಹನುಮೇಶವಿಠಲನ ಚರಣವ ನಂಬು
ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ
ಕರಿರಾಜ ಕರಿಯಲಾಕ್ಷಣಕೆ ಅವಸರದಲಿ
ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
****