Showing posts with label ತಸ್ಮಾತ್ ತ್ವಮುತ್ತಿಷ್ಠ guruvijaya vittala ankita suladi ಭಗವದ್ಗೀತಾ ಸುಳಾದಿ TASMAAT TWAMUTTISHTA BHAGAVAD GITA STOTRA SULADI. Show all posts
Showing posts with label ತಸ್ಮಾತ್ ತ್ವಮುತ್ತಿಷ್ಠ guruvijaya vittala ankita suladi ಭಗವದ್ಗೀತಾ ಸುಳಾದಿ TASMAAT TWAMUTTISHTA BHAGAVAD GITA STOTRA SULADI. Show all posts

Monday, 9 December 2019

ತಸ್ಮಾತ್ ತ್ವಮುತ್ತಿಷ್ಠ guruvijaya vittala ankita suladi ಭಗವದ್ಗೀತಾ ಸುಳಾದಿ TASMAAT TWAMUTTISHTA BHAGAVAD GITA STOTRA SULADI

Audio by Mrs. Nandini Sripad

ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ 
 ( ಗುರುವಿಜಯವಿಠ್ಠಲ ಅಂಕಿತ ) 

 ಶ್ರೀಭಗವದ್ಗೀತಾ ಸ್ತೋತ್ರ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

" ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವಂ ರಾಜ್ಯಂ ಸಮೃದ್ಧಂ
ಮಯೈ ವೈತೇ ನಿಹತಾಃ ಪೂರ್ವಮೇವ 
ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ " (ಅ 11 ಶ್ಲೋ 33)
ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆ 
ಉತ್ತರವ ಪೇಳುವದು 
ಭಾವಾಭಿಜನ್ಯವಾದ ಅಹಂಕಾರವಾದರೂ 
ಶ್ರೀವರ ನಿನ್ನಿಂದೇ ಪುಟ್ಟಿತೆನಗೆ 
ಪಾವನ ಮಹಿಮ ಗುರುವಿಜಯವಿಠ್ಠಲರೇಯಾ 
ಆವಪರಾಧ ಉಂಟು ತಿಳಿಸಿ ಪೇಳೋ ॥ 1 ॥

 ಮಟ್ಟತಾಳ 

" ದ್ರೋಣಂಚ ಭೀಷ್ಮಂಚ ಜಯದ್ರಥಂಚ 
ಕರ್ಣಂ ತಥಾನ್ಯಾನಪಿ ಯೋಧ ವೀರಾನ್ 
ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುದ್ಧ್ಯಸ್ವ ಜೇತಾऽಸಿ ರಣೇ ಸಪತ್ನಾನ್ " (ಅ 11 ಶ್ಲೋ 34)
ಪ್ರಾಣನಾಥನೆ ಗುರುವಿಜಯವಿಠ್ಠಲರೇಯಾ 
ಎನಗಾವದು ಕೃತ್ಯ ಇದರೊಳಗೆ ॥ 2 ॥

 ತ್ರಿವಿಡಿತಾಳ 

ವೀರನಾದವ ಒಂದು ಕರಗಸ ಕೈಯಲ್ಲಿ 
ಧರಿಸಿ ಶತ್ರುಗಳನ್ನು ಹನನ ಮಾಡೆ
ಪರಿಪ್ರಾಪ್ತವಾದ ಘನತಿಯು ಪುರುಷಗಲ್ಲದೆ ಜಡ 
ಕರಗಸಕೆ ಕೀರ್ತಿ ಬರುವದೆಂತೊ
ತುರಗ ಬಿಗಿದ ರಥ ಗಮನಾಗಮನದಿಂದ 
ಪರಿಖ್ಯಾತಾ ವೈದಿದ ಕೀರ್ತಿಯನ್ನು
ತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈ
ತೆರದಿ ಬರುವದಯ್ಯಾ ಎನಗೆ ಕೀರ್ತಿ
ಹರಿ ನೀ ವೊಲಿದು ಎನ್ನ ನಾಮ ರೂಪವ ಧರಿಸಿ 
ಧರಣಿ ಭಾರವ ನಿಳುಹಿ ಮೆರೆದ ದೇವಾ 
" ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ 
ಉಭೌತೌ ನವಿಜಾನೀತೋ ನಾಯಂ ಹಂತಿ ನಹನ್ಯತೇ "
ಕರುಣಾನಿಧಿಯೇ ಗುರುವಿಜಯವಿಠ್ಠಲರೇಯಾ 
ಹರಣ ಮಾಡುವ ಕರ್ತು ನೀನೆ ದೇವಾ ॥ 3 ॥

 ಅಟ್ಟತಾಳ 

" ನ ಜಾಯತೇ ಮ್ರಿಯತೇ ವಾ ಕದಾಚಿನ್ನಾ -
ಯಂ ಭೂತ್ವಾ ಭಾವಿತಾವಾ ನಭೂಯಃ 
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ 
ನಹನ್ಯತೆ ಹನ್ಯಮಾನೇ ಶರೀರೇ " 
ವಿಜಯಸಾರಥಿ ಗುರುವಿಜಯವಿಠ್ಠಲರೇಯ 
ಸೋಜಿಗವೇ ಸರಿ ಎನ್ನ ಅಪರಾಧವಾ ॥ 4 ॥

 ಆದಿತಾಳ 

" ಲೇಲೀಹ್ಯಸೇ ಗ್ರಸಮಾನಃ ಸಮಂತಾತ್ 
ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ
ತೇಜೋಭಿರಾಪೂರ್ಯ ಜಗತ್ ಸಮಗ್ರಂ 
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ " (ಅ 11 ಶ್ಲೋ 30)
ಬಾಲಾರ್ಕಕೋಟಿ ಪ್ರಭ ಗುರುವಿಜಯವಿಠ್ಠಲರೇಯಾ 
ಆಲೋಚಿಸಿದರೂ ಎನಗಿಲ್ಲಪರಾಧವಾ ॥ 5 ॥

 ಜತೆ 

ಬ್ರಹ್ಮಸ್ತು ಬ್ರಹ್ಮಾನಾಮಾಸೌ ರುದ್ರಸ್ತು ರುದ್ರನಾಮಾ 
ಎಮ್ಮ ನಾಮವು ನೀನೇ ಗುರುವಿಜಯವಿಠ್ಠಲರೇಯಾ ॥
*********

ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ 
( ಗುರುವಿಜಯವಿಠ್ಠಲ  ಅಂಕಿತ ) 
ಭಗವದ್ಗೀತಾ  ಸುಳಾದಿ 
ರಾಗ ಕಲ್ಯಾಣಿ 
ಧ್ರುವತಾಳ 
" ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವಂ ರಾಜ್ಯಂ ಸಮೃದ್ಧಂ
ಮಯೈ ವೈತೇ ನಿಹತಾಃ ಪೂರ್ವಮೇವ 
ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ " (ಅ 11 ಶ್ಲೋ 33)
ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆ 
ಉತ್ತರವ ಪೇಳುವದು 
ಭಾವಾಭಿಜನ್ಯವಾದ ಅಹಂಕಾರವಾದರೂ 
ಶ್ರೀವರ ನಿನ್ನಿಂದೇ ಪುಟ್ಟಿತೆನಗೆ 
ಪಾವನ ಮಹಿಮ ಗುರುವಿಜಯವಿಟ್ಠಲರೇಯಾ 
ಆವಪರಾಧ ಉಂಟು ತಿಳಿಸಿ ಪೇಳೊ ॥ 1 ॥ 
ಮಟ್ಟತಾಳ 
" ದ್ರೋಣಂಚ ಭೀಷ್ಮಂಚ ಜಯದ್ರಥಂಚ 
ಕರ್ಣಂ ತಥಾನ್ಯಾನಪಿ ಯೋಧ ವೀರಾನ್ 
ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಠಾಃ
ಯುದ್ಧ್ಯಸ್ವ ಜೇತಾऽಸಿ ರಣೇ ಸಪತ್ನಾನ್ " (ಅ 11 ಶ್ಲೋ 34)
ಪ್ರಾಣನಾಥನೆ ಗುರುವಿಜಯವಿಟ್ಠಲರೇಯಾ
ಎನಗಾವದು ಕೃತ್ಯ ಇದರೊಳಗೆ ॥ 2 ॥ 
ತ್ರಿವಿಡಿತಾಳ 
ವೀರನಾದವ ಒಂದು ಕರಗಸ ಕೈಯಲ್ಲಿ 
ಧರಿಸಿ ಶತ್ರುಗಳನ್ನು ಹನನ ಮಾಡೆ
ಪರಿಪ್ರಾಪ್ತವಾದ ಘನತಿಯು ಪುರುಷಗಲ್ಲದೆ ಜಡ 
ಕರಗಸಕೆ ಕೀರ್ತಿ ಬರುವದೆಂತೊ
ತುರಗ ಬಿಗಿದ ರಥ ಗಮನಾಗಮನದಿಂದ 
ಪರಿಖ್ಯಾತಾ ವೈದಿದ ಕೀರ್ತಿಯನ್ನು
ತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈ
ತೆರದಿ ಬರುವದಯ್ಯಾ ಎನಗೆ ಕೀರ್ತಿ
ಹರಿ ನೀ ವೊಲಿದು ಎನ್ನ ನಾಮ ರೂಪವ ಧರಿಸಿ 
ಧರಣಿ ಭಾರವ ನಿಳುಹಿ ಮೆರೆದ ದೇವಾ 
" ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ 
ಉಭೌತೌ ನವಿಜಾನೀತೋ ನಾಯಂ ಹಂತಿ ನಹನ್ಯತೇ "
ಕರುಣಾನಿಧಿಯೇ ಗುರುವಿಜಯವಿಟ್ಠಲರೇಯಾ 
ಹರಣ ಮಾಡುವ ಕರ್ತು ನೀನೆ ದೇವಾ ॥ 3 ॥ 
ಅಟ್ಟತಾಳ 
" ನ ಜಾಯತೇ ಮ್ರಿಯತೇ ವಾ ಕದಾಚಿನ್ನಾ -
ಯಂ ಭೂತ್ವಾ ಭಾವಿತಾವಾ ನಭೂಯಃ 
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ 
ನಹನ್ಯತೆ ಹನ್ಯಮಾನೇ ಶರೀರೇ " 
ವಿಜಯಸಾರಥಿ ಗುರುವಿಜಯವಿಟ್ಠಲರೇಯ
ಸೋಜಿಗವೇ ಸರಿ ಎನ್ನ ಅಪರಾಧವಾ ॥ 4 ॥ 
ಆದಿತಾಳ 
" ಲೇಲೀಹ್ಯಸೇ ಗ್ರಸಮಾನಃ ಸಮಂತಾತ್ 
ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ
ತೇಜೋಭಿರಾಪೂರ್ಯ ಜಗತ್ ಸಮಗ್ರಂ 
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ " (ಅ 11 ಶ್ಲೋ 30)
ಬಾಲಾರ್ಕಕೋಟಿ ಪ್ರಭ ಗುರುವಿಜಯವಿಟ್ಠಲರೇಯಾ
ಆಲೋಚಿಸಿದರೂ ಎನಗಿಲ್ಲಪರಾಧವಾ ॥ 5 ॥ 
ಜತೆ 
ಬ್ರಹ್ಮಸ್ತು ಬ್ರಹ್ಮಾನಾಮಾಸೌ ರುದ್ರಸ್ತು ರುದ್ರನಾಮಾ 
ಎಮ್ಮ ನಾಮವು ನೀನೇ ಗುರುವಿಜಯವಿಟ್ಠಲರೇಯಾ ॥
******