ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿಬಾರೆ ಸುರಮೋಹನ ನೀಕರತಾರೆ ಪ
ಮಕರಾಂಕನಯ್ಯನ ಕಾಣದೇ ನಾ ನಿಲ್ಲಲಾರೆ| ಯುಕುತಿಲೇ ತಂದು ನೀತೋರೇ| ಕ್ಷಣಯುಗವ ನೋಡುವರೇ| ಪ್ರಕಟದಲಿ ಕಣ್ಣಾರೆ ಕಾಂಬೆನೆಂದು 1
ದೀನಬಂಧು ಮೊರೆಹೊಕ್ಕವರ ಬಿಡನೆಂದು| ಮುನಿಜನ ಸಾರುವನೆಂದು|ನಂಬಿದೆನಾಮಕಬಂದು| ವನಜಾಕ್ಷ ಎನ್ನೊಳು ಕುಂದು|ನೊಡುವ ದುಚಿತವೇನಿಂದು| ಸನುಮುಖಕ ಮಾನವನು ತಂದುಕೂಡಿಸೇನಿಜಾ2
ನರಹರಿ ಶರಣಾಗತ ಸಹಕಾರಿ|ಬಿರುದವ ತಾಳಿದಾಪರಿ| ಮೊರೆಗೇಳಿದನು ದುರಿತಾರಿ|ಉರಗಾರಿ ಚಿನ್ನವನೇರಿ| ಬಂದ ನೋಡ ದಯಬೀರಿ| ಗುರು ಮಹಿಪತಿ ಪ್ರಭು ಉದಾರ|ನೆರೆದನೇತಾ3
***