Showing posts with label ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿ vijaya vittala. Show all posts
Showing posts with label ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿ vijaya vittala. Show all posts

Wednesday, 16 October 2019

ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿ ankita vijaya vittala

ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ
ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು ಪ

ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸುಜ್ಞಾನ
ವಳಿಸು ಪಾಪಕಲಿಯಾ ಬೆಳಿಸು ಘಳಿಸು
ತಾಮಸ ಸುಳಿಸು ಮಾರ್ಗ
ಬೆಳಿಸು ಚೆನ್ನಾಗಿ ಗೆಲಿಸು ವ್ರತವ
ಚಲಿಸು ಯಾತ್ರೆಯ ಇಳಿಸು ಮಮತೆ
ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ 1

ಕೀರ್ತನೆ ಕಾಡು ರಂಗನ
ಬೇಡು ದೈನದಿ ನೀಡು ಹಸ್ತವ
ಬಾಡು ನಿನ್ನೊಳಗಾಡು
ತಾಡುತಾ ಕೇಡು ಒದೆದು ಬಿಡು ನೆಚ್ಚ
ದೀಡ್ಯಾಡ್ಯೋ ಕಾಯವ ಗೂಢದ ಮಾತಾಡು ಕಲಾಪ
ಬೇಡರಟ್ಟಲು ಮೋಡು ನಿಲ್ಲದೆ ಪಾಡು ಪಂಥವಾ 2

ನೆರಿಯೊ ವೊಡನೆ ಸುರಿಯೊ ನಾಮವ
ಅರಿಯೊ ಮಹಿಮೆ ಮರಿಯೊ ವ್ಯಾಕುಲ
ಮೆರಿಯೊ ಗುಪ್ತದಿ ಜರಿಯೊ ಹೀನರಾ ಸರಿಯೊ ಮಿರಲು
ಗುರಿಯೊ ತಮಕ್ಕೆ ಸರಿಯೆ ಲಾಲಿಸು ಧರಿಯೊಳಗೆ ನೀ
ವಿಜಯವಿಠ್ಠಲನೆಂದು 3
************