ಕಾಖಂಡಕಿ ಶ್ರೀ ಮಹಿಪತಿರಾಯರು
ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಪ
ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1
ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2
ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
***