RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ಶಶಿಕಲಾ ಭೂಷಣನೆ ಶಂಕರನೆ ಪ
ಗಂಗಾಧರನೆ ಗೌರೀವರನೆ
ಅಂಗಜಮದಹರನೇ ಶಂಕರನೇ 1
ಮೃತ್ಯುಂಜಯನೆ ಮುಪ್ಪುರ ಹರನೆ
ಭಕ್ತರ ಪೊರೆಯುವನೆ ಶಂಕರನೆ 2
ಶ್ರೀಕಾಂತ ಹಿತಸಖ ಏಕಾಂತ ಹೃದಯ
ನೀ ಕರುಣಿಸೊ ಸದಯಾ ಶಂಕರನೆ 3
***