Showing posts with label ಯಾಕೆಲವೋ ನಿಗಮಮಣಿ vijaya vittala ankita suladi ಕೃಷ್ಣ ನಿಂದಾಸ್ತುತಿ ಸುಳಾದಿ YAKELAVO NIGAMAMANI KRISHNA NINDASTUTIH SULADI. Show all posts
Showing posts with label ಯಾಕೆಲವೋ ನಿಗಮಮಣಿ vijaya vittala ankita suladi ಕೃಷ್ಣ ನಿಂದಾಸ್ತುತಿ ಸುಳಾದಿ YAKELAVO NIGAMAMANI KRISHNA NINDASTUTIH SULADI. Show all posts

Monday, 30 August 2021

ಯಾಕೆಲವೋ ನಿಗಮಮಣಿ vijaya vittala ankita suladi ಕೃಷ್ಣ ನಿಂದಾಸ್ತುತಿ ಸುಳಾದಿ YAKELAVO NIGAMAMANI KRISHNA NINDASTUTIH SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ 


 ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿ 


 ರಾಗ ಕಲ್ಯಾಣಿ 


 ಝಂಪೆತಾಳ 


ಯಾಕೆಲವೋ ನಿಗಮಮಣಿ ಈ ಕುಟಿಲತನವೇನೋ

ಜೋಕೆ ಮಾಡುವದು ನಿನ್ನಿಂದ ಆಗದೇ

ಸಾಕೆ ಸಾಕುವ ಬಿರಿದು ಭಕುತ ವತ್ಸಲನೆಂಬ

ವಾಕು ಬೇಕಾಗಿಲ್ಲವೇನೋ ಪೇಳೋ

ಏಕಮೇವಾನೆಂದು ಸ್ತುತಿಸಿದರೆ ನಿನ್ನ ಮೊಗ -

ವಾಕಾಶ ನೋಡುತಿದೆ ಗರ್ವದಲಿ

ಬಾ ಕುಳ್ಳಿರಿಲ್ಲಿ ನಿನ್ನ ದೇವ ದೈವತನವೇನೋ

ಆಕಳನು ಕಾಯಿದಿ ಪೋಕತನದ -

ಲ್ಲೇಕಿಕನಾಗಿ ಆರಿಸಿದ ಹಣ್ಣು ಹಂಪಲೆ

ನಾಕ ಜನ ನೋಡುತಿರೆ ಮೆಲಲಿಲ್ಲವೇ

ಈ ಕಥೆಯನಾರಾದರರಿಯದವರೇ ಇಲ್ಲ

ನಾ ಕಠಿಣ ಉತ್ತರ ಪೇಳಲೇಕೆ

ಪ್ರಕಾಶಾತ್ಮ ನಾಮ ವಿಜಯವಿಟ್ಠಲ ಎನ್ನ

ವಾಕ ಬರದದ್ದು ನೀನು ಬಿಡಿಸಲಾಪೆಲೋ ದೇವ ॥ 1 ॥ 


 ಮಟ್ಟತಾಳ 


ಭೂತ ಭೂತವೆಂದು ಭೀತಿಗೊಂಡರೆ ಆ -

ಭೂತವೆ ಮಹದೊಡ್ಡ ಭೂತವಾಗಿ ತೋರಿ

ಆತುಮದೊಡನೆ ಸಂಗಾತ ತಿರುಗಿದಂತೇ

ತಾ ತೊಡಕಿಕೊಂಡು ಭೀತಿಗೊಳಿಸುವದು

ಭೂತ ನಾಮಕ ದೇವಾ ವಿಜಯವಿಟ್ಠಲ ನಿನಗೆ

ಸೋತೆ ವೆಂದವರಿಗೆ ಭೂತನಾಗಿ ನಿಲುವೆ ॥ 2 ॥ 


 ತ್ರಿವಿಡಿತಾಳ 


ಎದೆ ಮೇಲೊದದು ಅಂಜದಲೆ ನುಡಿಸಿದವನ

ಮುದದಿಂದಲರ್ಚಿಸಿ ಒದಗಿ ಬಿನ್ನೈಸಿದೆ

ಹುದುಗಿ ಗದಗದ ನದರಿ ಬೆದರಿ ನಿಂದವನಿಗೆ

ಬಧಿರನಂತೆ ಮಂದನಾಗಿ ಕೇಳದಲಿಪ್ಪೆ

ಪದೋಪದಿಗೆ ನಿನ್ನ ಪದಗಳ ನೆರೆನಂಬಿ

ಕದಲದಲೆ ನಿತ್ಯ ಹೃದಯದೊಳು

ಮೃದುವಾದ ಮನದಲ್ಲಿ ವಂದಿಸಿ ಕೊಂಡಾಡೆ

ಚದರಿ ದೂರಾಗಿ ಪೋಗುವದು ಏನೋ

ಎದುರಿಲಿ ನಿಂದು ತಿರುಗದ ಭಕ್ತರಿಗೆಲ್ಲಾ

ವದನದಿಂದಲಿ ಸೋಲಬಾರದ ಮುನ್ನ

ಬದಿಯಲಿ ನಿಂದು ಪರಿಪಾಲಿಸಿ ತೊಲಗದೆ

ಮದುವೆ ತೆತ್ತಿಗನಂತೆ ಇರಳು ಹಗಲು

ಪದುಮನಾಭನೆ ನಮ್ಮ ವಿಜಯವಿಟ್ಠಲ ಸ -

ರ್ವದ ನಿನ್ನ ನೆನೆದವಗೆ ವಿಧಿ ನಿಷೇಧವಿಲ್ಲಾ ॥ 3 ॥ 


 ಅಟ್ಟತಾಳ 


ಬಿಟ್ಟರೆ ಸಿಗನೆಂಬೊ ದಿಟ್ಟತನವೇನೋ

ಇಟ್ಟಣಿಸಿ ನಿನ್ನ ಅಟ್ಟುಳಿಂದಲಿ ಬೆ -

ನ್ನಟ್ಟಿ ಬಿಡದೆ ಬಂದು ಉಟ್ಟ ಪೀತಾಂಬರ 

ದಟ್ಟಿಯ ಶರಗನು ದಟ್ಟಡಿಯಿಂದಲಿ ನಿನ್ನ 

ಮುಟ್ಟಿ ಪಿಡಿದು ಒಳಗಿಟ್ಟು ಕೊಂಡು ಜಗ -

ಜಟ್ಟಿ ಚಿತ್ತದಲ್ಲಿ ಕಟ್ಟಿಹಾಕುವವೆನು

ಅಟ್ಟಹಾಸದಲ್ಲಿ ರಟ್ಟು ಮಾಡಿಬಿಡುವೆ

ಇಷ್ಟದೈವವೆ ವಿಜಯವಿಟ್ಠಲರೇಯನೇ 

ಪುಟ್ಟದಂತೆ ಪಾಪ ನಷ್ಟವ ಮಾಡೋ ॥ 4 ॥ 


 ಆದಿತಾಳ 


ತಿಲವನ್ನು ಕರತಳದಲ್ಲಿ ಇಟ್ಟುಕೊಳ್ಳಲು

ಸುಲಭತನದಿಂದಲಿ ತೈಲ ಫಲಿಸೋದೆ ಎಲೋ ದೇವಾ

ಸಲಿಗೆಯಿಂದಲಿ ನಿನಗೆ ಪಲ್ಲುದೆರೆದು ಬೇಡಿದರೆ

ಒಲಿದು ಕೊಡುವದು ಗುಣಾವಳಿಗಳು ನಿನ್ನವಲ್ಲ

ಒಳಗೆ ನಿಲಿಸಿಕೊಂಡು ಸಲೆ ಭಕುತಿಲಿಂದ

ಕೆಲಸಕ್ಕೆ ಪೋಗಗೊಡದಲೆ ಸಿಗಿಸಿಕೊಂಡು

ಚಲುವ ಕ್ಷೇತ್ರಜ್ಞ ವಿಜಯವಿಟ್ಠಲ ನಿನಗೆ

ಬಲವಂತ ನಾಗದಲೆ ಅಳಿಯವು ಪಾಪಾ ॥ 5 ॥ 


 ಜತೆ 


ನಾ ಮುಂದೆ ನೀ ಹಿಂದೆ ಗುರುವಿಕೆ ನಿನಗೇಕೋ

ಸಾಮಗ ವಿಜಯವಿಟ್ಠಲನೆ ಎನ್ನಾಧೀನಾ ॥

***