ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ.
ನೀರೊಳು ಯಳವ ಮೋರೆಯ ನೆಳಲ ನೋಡುವಿ
ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ
ಖಳನ ಛೇದಿಸಿ ಕೊಳಲ ದನಿಯನು
ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ 1
ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ
ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ
ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ
ನೀರೊಳಗೆ ಮನೆ ಭಾರ ಬೆನ್ನಲಿ 2
ಕೋರೆದಾಡೆಯ ನಾರಸಿಂಹನೆ ಭೂರಿ ಬೇಡಿದಿ
ಧೀರ ಹರುಷದಿ ವಾರಿ ಬಂಧಿಸಿ ಮಾರ ಜನಕನೆ
ನಾರಿಯರ ವ್ರತಭಂಗ ಕುದುರೆಯನೇರಿ
ಮೆರಿವೆ ಕೋಮಲಾಂಗನೆ 3
ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ
ಸಕಲನುಳಿಹಿದೆ ನೀನು ಭಕುತಿಯಿಂದಲಿ
ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ
ಅಖಿಳವೇದೋದ್ಧಾರ ಗಿರಿಧರ 4
ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ
ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ
ರುಕುಮನನುಜೆಯ ರಮಣ ಬೌದ್ಧನೆ
ಲಕ್ಷುಮಿಯರಸನೆ ಕಲ್ಕಿ ರೂಪನೆ 5
ನಿನ್ನ ರೂಪವಿದೆಲ್ಲಾ ನೋಡುವರಿಗೆ
ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು
ರಂನ್ನಘಾತಿದೆನಲ್ಲಾ ಕಂಣಮುಚ್ಚದೆ
ಬೆಂನ್ನ ತೋರುವೆ ಮಂಣ ಕೆÉದಿರದಿ 6
ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ
ಹಂಣುಸವಿದನೆ ಬೆಂಣೆಗಳ್ಳನೆ
ಹೆಂಣುಗಳ ವ್ರತಗಳೆವ ಹೆಳವನಂದು
ಗೆಲಿಸಿದ ರಂಗ ದೇವೋತ್ತುಂಗನೆ 7
****